ಹೆಬ್ರಿ: ಉದ್ಯಾವರದಲ್ಲಿ ನಡೆದ 7ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ, ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಿತೇಶ್ ಆರ್. ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಇವರು ಸೋಮೇಶ್ವರದ ರಘುನಾಥ ನಾಯ್ಕ ಮತ್ತು ಚಂದ್ರಾವತಿ ಅವರ ಪುತ್ರ. ರಿತೇಶ್ ಅವರು, ಸೋಮನಾಥ ಮತ್ತು ಡಾ. ವಿಜಯಲಕ್ಷ್ಮಿ ಆರ್. ನಾಯಕ್ ಅವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.