
ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಮಠ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು
ಹೆಬ್ರಿ: ‘ಭಜನೆಗೆ ಅಪಾರವಾದ ಶಕ್ತಿಯಿದೆ, ದೇವರನ್ನು ಒಲಿಸಲು ಭಜನೆಯೇ ಸುಲಭದ ಮಾರ್ಗ. ಭಜನೆಯ ಮಹಾಶಕ್ತಿಯನ್ನು ಸದಾಶಿವ ಉಪಾಧ್ಯಾಯರು ಸೂರಿಮಣ್ಣಿನ ಪವಿತ್ರ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ. ಆ ಭಜನೆ ಈಗ ಸುವರ್ಣ ಸಂಭ್ರಮದಲ್ಲಿರುವುದು ವಿಶೇಷ’ ಎಂದು ಧಾರ್ಮಿಕ ಮುಖಂಡ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಹೇಳಿದರು.
ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಮಠ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರವನ್ನು ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ, ಮುಖಂಡ ಶಿವಪುರ ಸುರೇಶ ಶೆಟ್ಟಿ ಮಾತನಾಡಿ, ‘ಸೂರಿಮಣ್ಣಿನ ಪವಿತ್ರ ಮಣ್ಣಿಗೆ ಅಪಾರವಾದ ಶಕ್ತಿಯಿದೆ ಎಂಬುದನ್ನು ತಪಸ್ಸಿನ ಮೂಲಕ ಸಾಧಿಸಿ ತೋರಿದ್ದಾರೆ. ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸುವಂತೆ’ ವಿಜ್ಞಾಪಿಸಿದರು.
ಸೂರಿಮಣ್ಣು ಮಠದ ಮುಖ್ಯಸ್ಥ, ಭಜನಾ ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ ಅವರು ಭಜನಾ ಸಂಭ್ರಮ ಮಾಹಿತಿ ನೀಡಿದರು. ವಿಧ್ವಾನ್ ಸೂರಿಮಣ್ಣು ರವಿರಾಜ್ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ವಕೀಲ ಭರತ್ ಕುಮಾರ್ ಶೆಟ್ಟಿ, ಮುಖಂಡ ರಮೇಶ ಪೂಜಾರಿ ಶಿವಪುರ, ರಾಮಚಂದ್ರ ಭಟ್ ವರಂಗ, ಸುಭಾಶ್ಚಂದ್ರ ನಾಯ್ಕ್ ಸೂರಿಮಣ್ಣು, ರಾಧಾಕೃಷ್ಣ ಪುತ್ತಿ ಪುತ್ತಿಬೆಟ್ಟು ಇದ್ದರು.
ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ ವಂದಿಸಿದರು. ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.