ಹೆಬ್ರಿ: ಇಲ್ಲಿನ ಅನಂತಪದ್ಮನಾಭ ದೇವಸ್ಥಾನದಿಂದ ಉಡುಪಿ ಕೃಷ್ಣಮಠಕ್ಕೆ ಧರ್ಮ ಜಾಗೃತಿ, ದೇವರ ಅನುಗ್ರಹ, ಉತ್ತಮ ಆರೋಗ್ಯ, ಲೋಕ ಕಲ್ಯಾಣಕ್ಕಾಗಿ 14ನೇ ವರ್ಷದ ಪಾದಯಾತ್ರೆ ಈಚೆಗೆ ನಡೆಯಿತು.
ಯಾತ್ರಿಕರು ಹಾದಿಯಲ್ಲಿ ದೇವರ ನಾಮಾವಳಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತ ತೆರಳಿದರು. ಪಾಡಿಗಾರ ವಡ್ಡಮೇಶ್ವರ ಮಠದ ಬೆಣ್ಣೆ ಕೃಷ್ಣ ದೇವರು, ಪೆರ್ಡೂರು ಅನಂತಪದ್ಮನಾಭ ದೇವರ ದರ್ಶನ ಮಾಡಿ ಹಿರಿಯಡ್ಕ ಪುತ್ತಿಗೆ ಮಠಕ್ಕೆ ತೆರಳಿ ಸುವರ್ಣ ನದಿಯಲ್ಲಿ ತೀರ್ಥಸ್ನಾನ ಮಾಡಿ ವಿಠಲ ದೇವರ ದರ್ಶನ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಉಡುಪಿಗೆ ತೆರಳಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದೇವರ ದರ್ಶನ ಮಾಡಿ ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ ಮಾಡಿ ಮಧ್ವ ಸರೋವರಕ್ಕೆ ತೆರಳಿ ತೀರ್ಥಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಿದರು. ನಂತರ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪರ್ಯಾಯ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮಿಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಳ್ಳಲಾಯಿತು.
ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್, ಸುದರ್ಶನ್ ಜೋಯಿಸ್ ನೇತೃತ್ವ ವಹಿಸಿದ್ದರು. ಗಣೇಶ್ ಉಳಿತಾಯ ಉಪ್ಪಳ, ಕೃಷ್ಣ ಉಳಿತಾಯ ಉಪ್ಪಳ, ವೀಣಾ ಭಟ್ ವರಂಗ, ರಮ್ಯಾ ಭಟ್ ಬಲ್ಲಾಡಿ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಶ್ವೇತಾ ಭಟ್ ದೊಡ್ಡಬಳ್ಳಾಪುರ, ಪ್ರಕಾಶ್ ಭಟ್ ಹೆಬ್ರಿ, ಶ್ರೀನಿವಾಸ ಭಟ್ ಎಣ್ಣೆಹೊಳೆ, ಶಿಶಿರ ಜೋಯಿಸ್ ಹೆಬ್ರಿ, ಜಾನಕಿ ಭಟ್ ಗಿಲ್ಲಾಳಿ, ರಾಘವೇಂದ್ರ ಕಲ್ಕೂರ್ ಉಪ್ಪಳ, ಶ್ರೀಶ ಭಟ್ ಸೇರಿ 30 ಮಂದಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.