ADVERTISEMENT

ಪಡುಬಿದ್ರಿ: ಇನ್ನಾ ಗ್ರಾಮ ಪಂಚಾಯಿತಿ ವಿಶೇಷ ಅಭಿಯಾನ

ಆಧಾರ್‌, ಆಯುಷ್ಮಾನ್ ಕಾರ್ಡ್‌ಗೆ ನೋಂದಣಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 5:01 IST
Last Updated 10 ಆಗಸ್ಟ್ 2022, 5:01 IST
ಇನ್ನಾ ಗ್ರಾಮ ಪಂಚಾಯತಿ ವತಿಯಿಂದ ಸೋಮವಾರ ವಿಶೇಷ ಅಭಿಯಾನ ನಡೆಯಿತು.ಅಧ್ಯಕ್ಷ ಕುಶ ಆರ್. ಮೂಲ್ಯ ಇದ್ದರು.
ಇನ್ನಾ ಗ್ರಾಮ ಪಂಚಾಯತಿ ವತಿಯಿಂದ ಸೋಮವಾರ ವಿಶೇಷ ಅಭಿಯಾನ ನಡೆಯಿತು.ಅಧ್ಯಕ್ಷ ಕುಶ ಆರ್. ಮೂಲ್ಯ ಇದ್ದರು.   

ಪಡುಬಿದ್ರಿ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಾ ಗ್ರಾಮ ಪಂಚಾಯಿತಿ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆಸಿದ ವಿಶೇಷ ಅಭಿಯಾನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಇನ್ನಾ ಗ್ರಾಮ ಪಂಚಾಯಿತಿ, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಕಾರ್ಮಿಕ ಇಲಾಖೆ ಕಾರ್ಕಳ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಯ ದಿ. ಗೋಪಾಲ ಭಂಡಾರಿ ಸಭಾಭವನದಲ್ಲಿ ವಿಶೇಷ ಅಭಿಯಾನ ನಡೆಯಿತು.

ಆಧಾರ್‌ ನೋಂದಣಿ, ಪರಿಷ್ಕರಣೆ, ಆಯುಷ್ಮಾನ್ ಕಾರ್ಡ್‌, ಆಬಾ ಕಾರ್ಡು, ಇ –ಶ್ರಮಿಕ್ ಕಾರ್ಡ್‌, ಕಾರ್ಮಿಕ ಕಾರ್ಡ್‌ ನೊಂದಣಿ ಹಾಗೂ ನವೀಕರಣ ಕಾರ್ಯಗಳು ನಡೆದವು. ಬಾಪೂಜಿ ಸೇವಾ ಕೇಂದ್ರದ ಮೂಲಕ ಪಿಂಚಣಿ ಅರ್ಜಿಗಳ ಸ್ವೀಕಾರ ಮತ್ತು ಅರ್ಜಿ ಪರಿಷ್ಕರಣೆ ಅವಕಾಶ ನೀಡಲಾಯಿತು.

ADVERTISEMENT

ಇನ್ನಾ ಗ್ರಾಮ ಪಂಚಾಯಿತಿ ಅಧ್ಯಕ ಕುಶ ಆರ್. ಮೂಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ವಿವಿಧ ಇಲಾಖೆಗಳ ಸಹಕಾರದಲ್ಲಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಗ್ರಾಮ
ಪಂಚಾಯಿತಿ ವತಿಯಿಂದ ಮಾಡಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಿತಾ ಶೆಟ್ಟಿ, ಸತೀಶ್ ಶೆಟ್ಟಿ, ದೀಪಕ್‌ ಕೋಟ್ಯಾನ್, ಶರ್ಮಿಳಾ, ಚಂದ್ರಹಾಸ ಶೆಟ್ಟಿ, ಸಮೀಕ್ಷಾ ಶೆಟ್ಟಿ, ಡಾ. ಗುರುದತ್, ಹನುಮಂತ, ಶರತ್, ಶ್ರುತಿ , ಪುಷ್ಪಾ, ರೇಖಾ, ಮಲ್ಲಿಕಾ, ಗೀತಾ, ಜಯ ಕೋಟ್ಯಾನ್, ಅಮರನಾಥ ಶೆಟ್ಟಿ, ಶ್ರೀಧರ ಶೆಟ್ಟಿ ಉಕ್ಕುಡ, ಪ್ರಸಾದ್‌ ಕುಂದರ್, ಸುಕೇತ್ ಶೆಟ್ಟಿ, ಶರತ್ ಶೆಟ್ಟಿ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾಲತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.