
ಪಡುಬಿದ್ರಿ: ಅಂತರರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್‌ನ ಶತಮಾನೋತ್ಸವ ಪ್ರಯುಕ್ತ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಪಡುಬಿದ್ರಿ ಇನ್ನರ್‌ವೀಲ್ ಕ್ಲಬ್ ಆಯೋಜಿಸಿದ ‘ಇನ್ನರ್ ವೀಲ್ ಟ್ರೋಫಿ 2024–ಮಹಿಳಾ ಥ್ರೋಬಾಲ್ ಟೂರ್ನಿಯಲ್ಲಿ ಮಂಗಳೂರು ಹರ್ಕ್ಯುಲರ್ಸ್ ‘ಬಿ’ ತಂಡ ಟ್ರೋಫಿ ಗೆದ್ದುಕೊಂಡಿತು.
ಮಂಗಳೂರಿನ ತುಳುನಾಡು ಯುನೈಟೆಡ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಂಗಳೂರು ಸ್ಪೋರ್ಟ್ಸಿಂಗ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ 16 ತಂಡಗಳು ಭಾಗವಹಿಸಿದ್ದವು. ಉತ್ತಮ ಎಸೆತಗಾರ್ತಿಯಾಗಿ ಹರ್ಕ್ಯುಲರ್ಸ್ ತಂಡದ ಶ್ರೇಯಾ, ಉತ್ತಮ ಹಿಡಿತಗಾರ್ತಿ ತುಳುನಾಡ್ ಯುನೈಟೆಡ್ ತಂಡದ ನಮ್ರತಾ, ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಹರ್ಕ್ಯುಲರ್ಸ್ ತಂಡದ ವೈಷ್ಣವಿ ಪಡೆದುಕೊಂಡರು.
ಇನ್ನರ್‌ವೀಲ್ ಜಿಲ್ಲಾ ಕೋಶಾಧಿಕಾರಿ ರಜನಿ ಭಟ್ ಟೂರ್ನಿ ಉದ್ಘಾಟಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ನಮ್ರತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್, ಅಂತರರಾಷ್ಟ್ರೀಯ ಥ್ರೋಬಾಲ್ ಅಟಗಾರ್ತಿ ಮಮತಾ ರವಿಕಿರಣ್, ಮಮತಾ ನವೀನ್, ಕಾರ್ಯದರ್ಶಿ ಮನೋರಮಾ ಸುವರ್ಣ ಇದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸುರೇಶ್ ಶೆಟ್ಚಿ ಗುರ್ಮೆ, ನಿರಂತರ ಅಭ್ಯಾಸ ಮಾಡಿದರೆ ರಾಷ್ಟ್ರಮಟ್ಟದ ಆಟಗಾರರಾಗಿ ಮೂಡಿಬರಲು ಸಾಧ್ಯ. ಆಟಗಾರರು ಶಿಸ್ತು ಅಳವಡಿಸಿಕೊಂಡು ನಿಯಮಗಳಿಗೆ ಬದ್ಧರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ಟೂರ್ನಿಯ ಸೋಲು ಮುಂದಿನ ಗೆಲುವಿಗೆ ಕಾರಣವಾಗುತ್ತದೆ ಎಂದರು.
ಇನ್ನರ್‌ವೀಲ್ ಅಧ್ಯಕ್ಷೆ ನಮ್ರತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ವ್ಯವಸಾಯ ಸಹಕಾರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಜೆಸಿಐ ಇಂಡಿಯಾ ನಿರ್ದೇಶಕ ವೈ. ಸುಕುಮಾರ್ ಇದ್ದರು. ಇನ್ನರ್‌ವೀಲ್ ಕಾರ್ಯದರ್ಶಿ ಮನೋರಮಾ ಸುವರ್ಣ ವಂದಿಸಿದರು. ಕೀರ್ತೀನ್ ಸಾಲ್ಯಾನ್, ಶುಭಾ ದಿನೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.