ADVERTISEMENT

ಉಡುಪಿ | ಅಂತರ ಜಿಲ್ಲಾ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2020, 5:55 IST
Last Updated 19 ಮೇ 2020, 5:55 IST
ಉಡುಪಿ ಜಿಲ್ಲೆಯಿಂದ ವಿವಿಧ ಊರುಗಳಿಗೆ ಮಂಗಳವಾರ ಬಸ್ ಸಂಚಾರ ಆರಂಭವಾಯಿತು.
ಉಡುಪಿ ಜಿಲ್ಲೆಯಿಂದ ವಿವಿಧ ಊರುಗಳಿಗೆ ಮಂಗಳವಾರ ಬಸ್ ಸಂಚಾರ ಆರಂಭವಾಯಿತು.   

ಉಡುಪಿ: ನಗರದಿಂದ ಮಂಗಳವಾರಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಮಂಗಳವಾರ ಬಸ್‌ಗಳು ಸಂಚರಿಸಿದವು. ಬೆಂಗಳೂರಿಗೆ6,ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ತಲಾ ಎರಡು ಬಸ್‌ಗಳು ಪ್ರಯಾಣ ಬೆಳೆಸಿದವು.

ಉಳಿದಂತೆ ಹೆಬ್ರಿ, ಕಾರ್ಕಳ, ಕುಂದಾಪುರ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ಬಸ್‌ಗಳು ಸಂಚರಿಸುತ್ತಿವೆ.

ರಾತ್ರಿ 7ರೊಳಗೆ ಬಸ್‌ಗಳು ನಿಗಧಿತ ಜಿಲ್ಲೆಗಳನ್ನು ತಲುಪಬೇಕಿರುವ ಕಾರಣ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಭಾಗಗಳಿಗೆ 11 ಗಂಟೆಯ ಬಳಿಕ ಬಸ್‌ಗಳನ್ನು ಓಡಿಸಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಡಿಪೊ ಸಿಬ್ಬಂದಿ ಮಾಹಿತಿ ನೀಡಿದರು.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹೆಚ್ಚಿನವರು ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಮರಳುತ್ತಿದ್ದು ಬೆಂಗಳೂರು ಮಾರ್ಗದ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ‌. ನಾಳೆಯಿಂದ ಹಂತಹಂತವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.