ADVERTISEMENT

ನಿಕೇತನ ಪ್ರೌಢಶಾಲೆ: ಇಂಟರ್‍ಯಾಕ್ಟ್ ಕ್ಲಬ್ ಪದಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:22 IST
Last Updated 30 ಜುಲೈ 2025, 6:22 IST
ಮಟಪಾಡಿಯ ಶ್ರೀನಿಕೇತನ ಪ್ರೌಢಶಾಲೆಯ ಇಂಟರ್‍ಯಾಕ್ಟ್‌ ಕ್ಲಬ್‌ನ ಪದಪ್ರದಾನ ಸಮಾರಂಭ ನಡೆಯಿತು
ಮಟಪಾಡಿಯ ಶ್ರೀನಿಕೇತನ ಪ್ರೌಢಶಾಲೆಯ ಇಂಟರ್‍ಯಾಕ್ಟ್‌ ಕ್ಲಬ್‌ನ ಪದಪ್ರದಾನ ಸಮಾರಂಭ ನಡೆಯಿತು   

ಬ್ರಹ್ಮಾವರ: ಮಟಪಾಡಿಯ ಶ್ರೀನಿಕೇತನ ಪ್ರೌಢಶಾಲೆಯ ಇಂಟರ್‍ಯಾಕ್ಟ್‌ ಕ್ಲಬ್‌ನ 2025–26ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು.

ಪದಪ್ರದಾನ ಅಧಿಕಾರಿಯಾಗಿ ಇಲ್ಲಿನ ರೋಟರಿ ಕ್ಲಬ್‌ ಅಧ್ಯಕ್ಷ ಸತೀಶ ಶೆಟ್ಟಿ ಇಂಟರ್‍ಯಾಕ್ಟ್ ಕ್ಲಬ್‌ ಅಧ್ಯಕ್ಷೆ ಪ್ರೇರಣಾ ಅವರಿಗೆ ಪದಪ್ರದಾನ ನೆರವೇರಿಸಿದರು. ಮುಖ್ಯಶಿಕ್ಷಕಿ ಶ್ಯಾಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಪೂರ್ವಾಧ್ಯಕ್ಷ ಅರುಣ್‌ ಕುಮಾರ್ ಶೆಟ್ಟಿ ಇಂಟರ್‍ಯಾಕ್ಟ್ ಕ್ಲಬ್‌ ಉದ್ದೇಶಗಳನ್ನು ತಿಳಿಸಿದರು.

ರೋಟರಿ ಕ್ಲಬ್‌ ಸಭಾಪತಿ ರಘುಪತಿ ಬ್ರಹ್ಮಾವರ, ಕಾರ್ಯದರ್ಶಿ ರೆಕ್ಸನ್ ಮೋನಿಸ್, ಶಿಕ್ಷಕ ಸಂಯೋಜಕಿ ಜಯಲಕ್ಷ್ಮೀ ಶೆಟ್ಟಿ, ಇಂಟರ್‍ಯಾಕ್ಟ್ ಸಭಾಪತಿ ಜಗದೀಶ ಕೆಮ್ಮಣ್ಣು ಭಾಗವಹಿಸಿದ್ದರು. ಕಾರ್ಯದರ್ಶಿ ಅನನ್ಯಾ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.