
ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವರ್ಣ ಎಂಟರ್‌ಪ್ರೈಸಸ್ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘದ ವತಿಯಿಂದ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ ಜತ್ತನ್ನ, ‘ಶತಮಾನ ಕಂಡ ಈ ಆಸ್ಪತ್ರೆಯಲ್ಲಿ ಅನೇಕ ರೋಗಿಗಳು ಉತ್ತಮ ಚಿಕಿತ್ಸೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ದಾದಿಯರ ಸೇವೆ ಅತ್ಯಂತ ಮಹತ್ವದ್ದು’ ಎಂದರು.
ಜಿಲ್ಲಾ ಸರ್ಜನ್ ಡಾ. ಅಶೋಕ ಮಾತನಾಡಿ, ದಾದಿಯರು ರೋಗಿಗಳ ನಿಜವಾದ ಆಪದ್ಭಾಂಧವರು. ತಮ್ಮ ಸೇವೆಯಲ್ಲಿ ಸಂತೋಷ ಕಾಣುವ ಇವರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಮಾತನಾಡಿದರು. ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯ ದಾರಿಯರಾದ ಶಿಲ್ಪಾ ಎಸ್., ದೀನಾ ಪ್ರಭಾವತಿ ಅಲ್ಮೆಡಾ, ಲೀಲಾವತಿ, ರಿನಾ ವೆಲೆನ್ಸಿಯಾ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಮಧುಸೂದನ್ ಹೇರೂರು ಸ್ವಾಗತಿಸಿ ವಂದಿಸಿದರು.
ಜಯಂಟ್ಸ್ಫೆಡರೇಷನ್ ಅಧ್ಯಕ್ಷ ತೇಜಶ್ವರರಾವ್, ಮಾಜಿ ಅಧ್ಯಕ್ಷ ಮಧುಸೂದನ ಹೇರೂರು, ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ಒಲಿವೇರಾ, ವಿವೇಕಾನಂದಕಾಮತ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ, ಶ್ರೀನಾಥ್, ಡೊರಿಸ್ಡಿಸೋಜ, ರೋಹಿರತ್ನಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.