ಪ್ರಾತಿನಿಧಿಕ ಚಿತ್ರ
ಉಡುಪಿ: ಕೊಂದವರು ಯಾರು? ಆಂದೋಲನದ ವತಿಯಿಂದ ಇದೇ 16 ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ ರದ್ದಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳನ್ನು ಹರಡಲಾಗುತ್ತಿದೆ. ಅದು ಸುಳ್ಳು, ಸಮಾವೇಶ ನಡೆದೇ ನಡೆಯುತ್ತೆ. ರಾಜ್ಯದ ವಿವಿಧೆಡೆಯ ಮಹಿಳೆಯರು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಂದೋಲನದ ಜ್ಯೋತಿ ಎ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನ್ಯಾಯ ಸಮಾವೇಶ ನಡೆಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮತಿ ಪಡೆಯಲಾಗಿದೆ. ಹಾಗೇನಾದರೂ ಬದಲಾವಣೆ ಇದ್ದರೆ ನಾವೇ ತಿಳಿಸುತ್ತೇವೆ ಎಂದರು.
ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದವರು ಯಾರು? ಅಲ್ಲಿ ನಡೆದಿರುವ ಅಸಹಜ ಸಾವುಗಳಿಗೆ ಕಾರಣ ಯಾರು? ಮತ್ತು ಅಲ್ಲಿ ಕಾಣೆಯಾದ ಮಹಿಳೆಯರು ಮತ್ತು ಯುವತಿಯರು ಎಲ್ಲಿ ಹೋದರು? ಎಂಬ ಸತ್ಯವನ್ನು ಹೊರತರಲು ಎಸ್‌ಐಟಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಶಶಿಕಲಾ ಶೆಟ್ಟಿ, ಗೀತಾ ಸುರೇಶ್, ವಸಂತಿ ಶಿವಾನಂದ್, ಕುಸುಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.