ADVERTISEMENT

‘ಕಡಲತಡಿಯಿಂದ ಹಿಮಗಿರಿಯ ತನಕ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 15:06 IST
Last Updated 8 ನವೆಂಬರ್ 2020, 15:06 IST
ಸುಭದ್ರಾ ಮಾತಾಜಿ ಅವರ ಆತ್ಮಕತೆಯ ಕನ್ನಡ ಅವತರಣಿಕೆಯನ್ನು ಭಾನುವಾರ ಹರಿದ್ವಾರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪತಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಬಿಡುಗಡೆ ಮಾಡಿದರು
ಸುಭದ್ರಾ ಮಾತಾಜಿ ಅವರ ಆತ್ಮಕತೆಯ ಕನ್ನಡ ಅವತರಣಿಕೆಯನ್ನು ಭಾನುವಾರ ಹರಿದ್ವಾರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪತಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಬಿಡುಗಡೆ ಮಾಡಿದರು   

ಉಡುಪಿ: ಸುಭದ್ರಾ ಮಾತಾಜಿ ಕುರಿತ ಆತ್ಮಕತೆಯ ಕನ್ನಡ ಅವತರಣಿಕೆ ‘ಕಡಲತಡಿಯಿಂದ ಹಿಮಗಿರಿಯ ತನಕ’ ಪುಸ್ತಕವನ್ನು ಭಾನುವಾರ ಹರಿದ್ವಾರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪತಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಬಿಡುಗಡೆ ಮಾಡಿದರು.

ಅಧ್ಯಾತ್ಮದ ಸೆಳೆತದಿಂದ ಉಡುಪಿಯಲ್ಲಿ ವಿಶ್ವೇಶ ತೀರ್ಥ ಶ್ರೀಗಳಿಂದ ಮಂತ್ರದೀಕ್ಷೆ ಪಡೆದು ಹಿಮಾಲಯದಲ್ಲಿ ಒಂಬತ್ತು ವರ್ಷ ಅಧ್ಯಾತ್ಮ ಸಾಧನೆ ಮಾಡಿರುವ ಸುಭದ್ರಾ ಮಾತಾಜಿ, ಹರಿದ್ವಾರದಲ್ಲಿ ಆಶ್ರಮ ಸ್ಥಾಪಿಸಿ ಸಾಧು ಸಂತರು ಯಾತ್ರಿಗಳಿಗೆ ಊಟ, ವಸತಿ, ಆರೋಗ್ಯ ಸೇವೆ ನೀಡಿದ್ದಾರೆ.

ಸಧ್ಯ ಅನಾರೋಗ್ಯದಿಂದ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತಾಜಿ ಕುರಿತು ಹಿಂದಿಯಲ್ಲಿ ರಚಿತವಾಗಿರುವ ಕೃತಿಯನ್ನು ಚಿಂತಕ ಡಾ.ಜಿ.ಭಾಸ್ಕರ ಮಯ್ಯ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ADVERTISEMENT

ರಾಮಕೃಷ್ಣ ಆಶ್ರಮ ಆಸ್ಪತ್ರೆಯ ಮುಖ್ಯಸ್ಥ ಡಾ.ಧಿಯಾಧಿಪಾನಂದ, ತಪೋವನಿ ಸುಭದ್ರಾ ಮಾತಾ ಧರ್ಮಾರ್ಥ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಹದ್ದೂರ್ ಸಿಂಗ್ ವರ್ಮಾ, ಪೇಜಾವರ ಶ್ರೀಗಳ ಆಪ್ತಕಾರ್ಯದರ್ಶಿ ವಿಷ್ಣು ಆಚಾರ್ಯ, ಜಿ.ಎ.ಅನಂತ, ಕೃಷ್ಣ ಭಟ್, ಹರಿದ್ವಾರ ಪೇಜಾವರ ಶಾಖಾ ಮಠದ ವ್ಯವಸ್ಥಾಪಕ ಮನೋಜ್, ಅನೂಪ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಈ ಸಂದರ್ಭ ಉಪಸ್ಥಿತರಿದ್ದರು.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.