ADVERTISEMENT

ಉಡುಪಿ: ಕಲಾವಿದರಿಗೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 15:14 IST
Last Updated 25 ಜುಲೈ 2021, 15:14 IST
ಕೋವಿಡ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಕಲಾವಿದರಿಗೆ ಭಾನುವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ತಲಾ ₹ 5,000 ಆರ್ಥಿಕ ನೆರವು ವಿತರಿಸಲಾಯಿತು.
ಕೋವಿಡ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಕಲಾವಿದರಿಗೆ ಭಾನುವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ತಲಾ ₹ 5,000 ಆರ್ಥಿಕ ನೆರವು ವಿತರಿಸಲಾಯಿತು.   

ಉಡುಪಿ: ದುಬೈನಲ್ಲಿ ಟೆಕ್ನಿಕಲ್ ಮ್ಯಾನೇಜರ್‌ ಆಗಿರುವ ನಿಟ್ಟೂರು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ರಾಜೇಶ್ ಕುಮಾರ್ ಕೋವಿಡ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಗಳಿಗೆ ₹ 50,000 ನೀಡಿದ್ದು, ಭಾನುವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ 10 ಕಲಾವಿದರಿಗೆ ತಲಾ ₹ 5,000 ವಿತರಿಸಲಾಯಿತು ಎಂದ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದರು.

ಕಲಾರಂಗದಿಂದ ನೆರವು ಪಡೆದವರು ಆರ್ಥಿಕವಾಗಿ ಸಬಲರಾದ ಬಳಿಕ ಸಮಾಜಕ್ಕೆ ಕೈಲಾದ ಸಹಾಯ ನೀಡಬೇಕು ಎಂದು ಮುರಳಿ ಕಡೇಕರ್ ಸಲಹೆ ನೀಡಿದರು.

ರಾಜೇಶ್‌ 50 ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವಷ್ಟು ಆಹಾರ ಸಾಮಾಗ್ರಿಗಳನ್ನು ನೀಡಿದ್ದಾರೆ. ಇಂತಹ ವಿದ್ಯಾರ್ಥಿಗಳ ಸದ್ಗುಣಗಳು ಶಿಕ್ಷಕರಾದವರಿಗೆ ಸಾರ್ಥಕ ಭಾವ ಉಂಟುಮಾಡುತ್ತದೆ ಎಂದರು.

ADVERTISEMENT

ಈ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವಿ.ಭಟ್, ಹಳೆ ವಿದ್ಯಾರ್ಥಿ ಪಿ.ಕೃಷ್ಣಮೂರ್ತಿ ಭಟ್, ಶಿಕ್ಷಕ ಎಚ್.ಎನ್.ಶೃಂಗೇಶ್ವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.