ADVERTISEMENT

‘ಅರಿವು ಇಲ್ಲದೆ ಚರಿತ್ರೆ ಕಟ್ಟಲು ಆಗದು’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:06 IST
Last Updated 23 ಡಿಸೆಂಬರ್ 2025, 7:06 IST
ಕಚೇರ್ಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲ್ಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ನಡೆಯಿತು
ಕಚೇರ್ಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲ್ಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ನಡೆಯಿತು   

ಬ್ರಹ್ಮಾವರ: ಚರಿತ್ರೆಯ ಅರಿವು ಇಲ್ಲದವರು ಚರಿತ್ರೆ ಕಟ್ಟಲು ಸಾಧ್ಯವಿಲ್ಲ. ಕನ್ನಡಿಗರು ಶೂರರು, ವೀರರು ಪರಾಕ್ರಮಿಗಳು. ನಾಡು –ನುಡಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದು ಚೇರ್ಕಾಡಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಯ್ಕ ಹೇಳಿದರು.

ಚೇರ್ಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲ್ಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚೇರ್ಕಾಡಿ ಪಂಚಾಯಿತಿ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ, ನಾಡು ನುಡಿಯ ಪ್ರೀತಿ ಬರಬೇಕಾದದ್ದು ವಿದ್ಯೆಯಿಂದ ಮತ್ತು ಸಂಸ್ಕಾರದಿಂದ. ಅಂತಹ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ನಡೆಸಿದೆ ಎಂದರು. ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಬ್ರಹ್ಮಾವರ ತಾಲ್ಲೂಕು ಗುಂಡ್ಮಿ ರಾಮಚಂದ್ರ ಐತಾಳ ಚಟುವಟಿಕೆಗಳ ಮೂಲಕ ಕಥೆ, ಕವನಗಳ ಬಗ್ಗೆ ಆಸಕ್ತಿ ಮೂಡಿಸಿದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಲಂಬೋದರ ಹೆಗಡೆ ಯಕ್ಷಗಾನದ ಪದ್ಯ, ಅರ್ಥಗಾರಿಕೆ, ಹೂವಿನ ಕೋಲಿನ ವಿವರಣೆ ನೀಡಿ, ಪ್ರಾತ್ಯಕ್ಷಿಕೆ ನಡೆಸಿದರು.

ಅಚ್ಯುತ ಪೂಜಾರಿ, ಸುಕನ್ಯಾ ಸೋಮಯಾಜಿ, ಸುಪ್ರೀತಾ ಪುರಾಣಿಕ್, ಸಮೂಹ ಗೀತೆ, ನೃತ್ಯ, ಭಾವಗೀತೆಗಳನ್ನು ಹಾಡಿದರು.

ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಶೀಲಾ, ಶಿಕ್ಷಕಿಯರಾದ ಮಮತಾ, ಕಸ್ತೂರಿ, ಪ್ರೇಮಾ, ನಯನಾ ಮಕ್ಕಳ ಜತೆಯಲ್ಲಿ ಸಾಹಿತ್ಯದ ಅನುಭವ ಪಡೆದರು. ಶಿಲ್ಪಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.