
ಎರಡನೇ ಹಂತದ ಜೀರ್ಣೋದ್ಧಾರ ಕಾಮಗಾರಿ ಉದ್ಘಾಟನೆ ಮತ್ತು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ "ಶ್ರೀ ಸುಧೀಂದ್ರ ಶತನಮನ ಶತಸ್ಮರಣ ಶತಕಲಾವಿದ ಕಲಾರಾಧನಾ - ಬೃಹತ್ ವಸ್ತು ಕಲಾ ಪ್ರದರ್ಶನ ಹಾಗೂ ಭಜನಾ ಮಂಗಲೋತ್ಸವ ನಡೆಯಿತು.
ಕಾಪು (ಪಡುಬಿದ್ರಿ): ಕೊಂಕಣಿ ಮಠ ಕಾಪು ವೆಂಕಟರಮಣ ದೇವಾಲಯದ ಎರಡನೇ ಹಂತದ ಜೀರ್ಣೋದ್ಧಾರ ಕಾಮಗಾರಿ ಉದ್ಘಾಟನೆ, ಸುಧೀಂದ್ರತೀರ್ಥ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ‘ಶ್ರೀ ಸುಧೀಂದ್ರ ಶತನಮನ ಶತಸ್ಮರಣ ಶತಕಲಾವಿದ ಕಲಾರಾಧನಾ’ ವಸ್ತು ಕಲಾ ಪ್ರದರ್ಶನ, ಭಜನಾ ಮಂಗಲೋತ್ಸವ ನಡೆಯಿತು.
ಸಂಯಮೀಂದ್ರತೀರ್ಥ ಶ್ರೀಪಾದ ಆಶಿರ್ವಚನ ನೀಡಿ, ಗೌಡ ಸಾರಸ್ವತ ಸಮಾಜವು ದೇವತಾರಾಧನೆಗೆ ವಿಶೇಷ ಮಹತ್ವ ನೀಡುತ್ತದೆ. ಕಾಪು ಪೇಟೆ ವೆಂಕಟರಮಣ ದೇವಸ್ಥಾನದ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸಂಕಲ್ಪಿಸಲಾಗಿದೆ. ದೇವರ ಅನುಗ್ರಹ, ಹರಿಗುರುಗಳ ಆಶೀರ್ವಾದದಿಂದ ಸಮಸ್ತ ಅಭಿವೃದ್ಧಿ ಕಾರ್ಯ ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.
ಪ್ರಧಾನ ಅರ್ಚಕ ಕಮಲಾಕ್ಷ ಭಟ್ ನೇತೃತ್ವದಲ್ಲಿ ಶ್ರೀನಿವಾಸ ಭಟ್ ಮತ್ತು ವೈದಿಕ ವೃಂದದರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ವಸ್ತು ಕಲಾಪ್ರದರ್ಶನಕ್ಕೆ ಚಾಲನೆ ನೀಡಿದ ಸಂಯಮೀಂದ್ರ ತೀರ್ಥ ಶ್ರೀಪಾದರು, ಪ್ರತಿಯೊಬ್ಬರಲ್ಲೂ ಒಂದು ಕಲೆ, ಪ್ರತಿಭೆ ಅಡಗಿರುತ್ತದೆ. ಅದನ್ನು ಸಮಾಜದ ಮುಂದೆ ತಂದು, ಸಮಾಜದ ಗಮನ ಸೆಳೆಯುವುದು ನಿಜವಾದ ಸಾಧನೆ ಎಂದರು. ಪ್ರದರ್ಶನದಲ್ಲಿ ಭಾಗವಹಿಸಿದವರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾ ಪ್ರದರ್ಶನದಲ್ಲಿ 85 ವರ್ಷ ವಯಸ್ಸಿನ ಲಲಿತಾ ನಬಾಯಿ ಪ್ರಭು ಅವರು ನಿರುಪಯುಕ್ತ ವಸ್ತುಗಳಿಂದ ರಚಿಸಿದ ಕಲೆ, 9 ವರ್ಷ ವಯಸ್ಸಿನ ಸಮರ್ಥ್ ಭಟ್ ಅವರ ಗೊಂಬೆ ರಚನೆ ಗಮನ ಸೆಳೆದವು.
ದೇವಸ್ಥಾನದ ಆಡಳಿತ ಮೊಕ್ತಸರ ಕೆ. ಪ್ರಸಾದ್ ಗೋಕುಲ್‌ದಾಸ್ ಶೆಣೈ, ಮಾಜಿ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಕುಲದಾಸ್ ಆನಂದರಾಯ ಶೆಣೈ, ಕೋಶಾಧಿಕಾರಿ ಕೆ. ಲಕ್ಷ್ಮೀ ನಾರಾಯಣ ನಾಯಕ್, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್, ಶ್ರೀಕಾಂತ್ ಲಕ್ಷ್ಮೀನಾರಾಯಣ ಭಟ್, ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಮಜೂರು, ಸುನೀಲ್ ಪೈ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡ ವಿನಯ್ ಕುಮಾರ್ ಸೊರಕೆ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಎಂಜಿನಿಯರ್ ವೆಂಕಟೇಶ್ ಪೈ, ಮುಖಂಡರು, ಸಮುದಾಯದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.