ADVERTISEMENT

ಬೆಳ್ಮಣ್: ಕರಾಟೆ ತರಬೇತಿ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 5:57 IST
Last Updated 20 ಅಕ್ಟೋಬರ್ 2022, 5:57 IST
ಶಿಬಿರವನ್ನು ವಕೀಲೆ ಬೆಳ್ಮಣ್ ಸರಿತಾ ರವೀಂದ್ರ ಶೆಟ್ಟಿ ಉದ್ಘಾಟಿಸಿದರು
ಶಿಬಿರವನ್ನು ವಕೀಲೆ ಬೆಳ್ಮಣ್ ಸರಿತಾ ರವೀಂದ್ರ ಶೆಟ್ಟಿ ಉದ್ಘಾಟಿಸಿದರು   

ಕಾರ್ಕಳ: ಕರಾಟೆ ಆತ್ಮರಕ್ಷಣಾ ಕಲೆಯಾಗಿದ್ದು ಮಕ್ಕಳಲ್ಲಿ ಸಂಸ್ಕಾರದ ಜೊತೆ ಶಿಸ್ತು ಕಲಿಸಲು ಇದು ನೆರವಾಗಲಿದೆ ಎಂದು ವಕೀಲೆ ಬೆಳ್ಮಣ್ ಸರಿತಾ ರವೀಂದ್ರ ಶೆಟ್ಟಿ ಅವರು ಹೇಳಿದರು.

ತಾಲ್ಲೂಕಿನ ಬೆಳ್ಮಣ್ ವಿಠೋಭಾ ಭಜನಾ ಮಂದಿರದಲ್ಲಿ ಬುಡೋಕಾನ್ ಕರಾಟೆ ಹಾಗೂ ಮಾರ್ಷಲ್ ಆರ್ಟ್ಸ್ ಡೋ ಇಂಡಿಯಾದ ಬೆಳ್ಮಣ್ ಶಾಖೆ ಆಯೋಜಿಸಿರುವ ಕರಾಟೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿ ಶೋಧನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ನದೀಮ್, ರಂಗಭೂಮಿ ಕಲಾವಿದ ಹರಿಪ್ರಸಾದ್ ನಂದಳಿಕೆ ಹಾಗೂ ತರಬೇತುದಾರ ಮಾಲತೇಶ್ ಎಚ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ರಾಜ್ಯ ಕರಾಟೆ ಶಿಕ್ಷಕರ ಸಂಘದ ಕೋಶಧಿಕಾರಿ ರವಿ ಸಾಲ್ಯಾನ್, ಕಾರ್ಕಳ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಕರಾಟೆ ಶಿಕ್ಷಕಿ ಮೃಣಾಲಿ ಶೆಟ್ಟಿ ಇದ್ದರು. ಮುಖ್ಯ ಶಿಕ್ಷಕ ಸತೀಶ್ ಪೂಜಾರಿ ಸ್ವಾಗತಿಸಿದರು. ಬೆಳ್ಮಣ್ ಜೇಸಿಐ ಆಧ್ಯಕ್ಷ ವೀಣೇಶ್ ಅಮೀನ್ ಸಾಂತೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.