ADVERTISEMENT

ಕಾರ್ಕಳ | ಪ್ರಧಾನಿ ಕುರಿತು ಪೋಸ್ಟ್: ಎಫ್ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:14 IST
Last Updated 27 ಫೆಬ್ರುವರಿ 2026, 8:14 IST
ಬಿಜೆಪಿ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದರು
ಬಿಜೆಪಿ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದರು   

ಕಾರ್ಕಳ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿದ ಮಹಿಳೆಯೊಬ್ಬರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಂದು ಸಿರ ಎನ್ನುವ ಮಹಿಳೆ ಪ್ರಧಾನಿ ಮೋದಿಯವರ ಫೋಟೊ ಎಡಿಟ್ ಮಾಡಿ, ಅವರ ದೇಹಕ್ಕೆ ನ್ಯೂಸ್ ಪೇಪ‌ರ್ ಸುತ್ತಲಾಗಿದೆ. ತಾನು ಬೆತ್ತಲಾಗಿದ್ದು, ಕಾಂಗ್ರೆಸ್‌ನವರು ಬೆತ್ತಲಾಗಿದ್ದಾರೆ ಎನ್ನುವ ಮಾತು ಹೇಳುತ್ತಿರುವಂತೆ ಬಿಂಬಿಸಲಾಗಿದೆ. ಅಲ್ಲದೇ ಫೋಟೋ ಕೆಳಗೆ ಪರರ ಹಂಗಿಸುವ ಮುನ್ನ ನಿನ್ನ ನೀ ನೋಡು ಮರ್ಮಜ್ಞ! ಎನ್ನುವ ಬರಹ ಬರೆಯಲಾಗಿದೆ. ಈ ಪೋಸ್ಟ್  ಕಾರ್ಕಳದ ಬಿಜೆಪಿ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಎನ್ನುವವರು ವಿರುದ್ಧ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT