ADVERTISEMENT

ಉಡುಪಿ | ಜೂಜಾಟಕ್ಕೆ ದಾಳಿ: ನಗದು, ಮೊಬೈಲ್ ವಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:00 IST
Last Updated 11 ಫೆಬ್ರುವರಿ 2026, 7:00 IST
<div class="paragraphs"><p>ಜೂಜಾಟ (ಸಾಂದರ್ಭಿಕ ಚಿತ್ರ)</p></div>

ಜೂಜಾಟ (ಸಾಂದರ್ಭಿಕ ಚಿತ್ರ)

   

ಕಾರ್ಕಳ: ಕುಕ್ಕುಂದೂರು ಗ್ರಾಮದಲ್ಲಿ ಖಾಸಗಿಯವರಿಗೆ ಸೇರಿದ ಕಟ್ಟಡವೊಂದರಲ್ಲಿ ಜೂಜು ಆಡುತ್ತಿದ್ದಾಗ ಪೋಲಿಸರು ದಾಳಿ ನಡೆಸಿ ಜುಗಾರಿಗೆ ಬಳಸಿದ ಸಾಮಗ್ರಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದ ನಕ್ರೆ ಬೈಲ್‌‌ಬೆಟ್ಟು ಎಂಬಲ್ಲಿ ಮಂಗಳೂರಿನ ಅಪ್ರಿತ್, ನಿಶಾಂತ ಎಂಬುವರು ಜುಗಾರಿ ಆಡುತ್ತಿದ್ದಾಗ ನಗರ ಠಾಣೆಯ ಪಿಎಸ್ಐ ಮುರಳೀಧರ ನಾಯ್ಕ್‌, ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆಟಕ್ಕೆ ಬಳಸಿದ ₹22,690 ನಗದು, 9 ಮೊಬೈಲ್, ಇತರ ಸಲಕರಣೆ ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಕರಣ ಆರೋಪಿ ಉಮ್ಮರ್ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್. ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಪಾನ್, ಚೇತಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ಆರೋಪಿಗಳು ಓಡಿ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.