ADVERTISEMENT

ಕಾಪು | ಪ್ರವಾದಿ ಮನುಕುಲದ ಮಾರ್ಗದರ್ಶಕರು: ಎಂ.ಎ.ಗಫೂರ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:48 IST
Last Updated 2 ಫೆಬ್ರುವರಿ 2026, 1:48 IST
ಕಾಪು ಸಮೀಪದ ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸ್ಜಿದ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್  ಮಾತನಾಡಿದರು. 
ಕಾಪು ಸಮೀಪದ ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸ್ಜಿದ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್  ಮಾತನಾಡಿದರು.    

ಕಾಪು (ಪಡುಬಿದ್ರಿ): ‘ಪ್ರವಾದಿಯವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಅಗತ್ಯ. ಪ್ರವಾದಿ ಮುಹಮ್ಮದ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಮನುಕುಲಕ್ಕೆ ಮಾರ್ಗದರ್ಶಕರು’ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.

ಇಲ್ಲಿಗೆ ಸಮೀಪದ ಮಲ್ಲಾರು ಮಜೂರಿನ ಬದ್ರಿಯಾ ಜುಮಾತ್ ಮಸೀದಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ‘ನೋಡ ಬನ್ನಿ ನಮ್ಮ ಮಸೀದಿ’ ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮುದಾಯದಲ್ಲಿ ಭಕ್ತಿ, ಶ್ರದ್ಧೆ ಬೆಳೆಸುವ ಅಗತ್ಯವಿದೆ. ಯುವಜನರು ಸನ್ಮಾರ್ಗದಲ್ಲಿ ನಡೆಯುವ ಮೂಲಕ ರಾಷ್ಟ್ರದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು. ಶಕ್ತಿಯುತ ಯುವಸಮೂಹ ಸಮಾಜವನ್ನು ಕಾಡುತ್ತಿರುವ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.

ADVERTISEMENT

ಮಸೀದಿಯ ಪ್ರವೇಶ ದ್ವಾರ, ಸೋಲಾರ್ ಅಳವಡಿಕೆ, ಮಸೀದಿ ಅಂಗಳ ಪ್ರವೇಶದ ಮುಖ್ಯದ್ವಾರ, ತಡೆಗೋಡೆ, ಅಡುಗೆ ಕೊಣೆ, ದಫನ ಭೂಮಿ ಮುಂತಾದ ಹಲವು ಅಭಿವೃದ್ದಿ ಕಾರ್ಯಗಳನ್ನು ಸಯ್ಯಿದ್ ಕುಂಬೋಳ್ ತಂಙಳ್ ಉದ್ಘಾಟಿಸಿದರು. ಮಸೀದಿಯ ಸಮಗ್ರ ಅಭಿವೃದ್ಧಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಫಾರೂಕ್ ಚಂದ್ರನಗರ, ವಿವಿಧ ಕಾಮಗಾರಿಗಳ ದಾನಿಗಳಾದ ಶಂಸುದ್ದೀನ್ ಉಮರ್ ಮಜೂರು, ಮುಹಮ್ಮದ್ ಹನೀಫ್ ಮಜೂರು, ತಖ್ವೀಯತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಮಜೂರು, ಸಿರಾಜುಲ್ ಹುದಾ ದಫ್ ಸಮಿತಿ, ಸ್ವಲಾತ್ ಸಮಿತಿ ಕೊಂಬಗುಡ್ಡೆ ಅವರನ್ನು ಸನ್ಮಾನಿಸಲಾಯಿತು.

ನೌಫಲ್ ಸಖಾಫಿ ಕಳಸ, ಉಡುಪಿ ಸಂಯುಕ್ತ ಸಹಾಯಕ ಖಾಝಿ ಬಿ.ಕೆ. ಅಬ್ದುರ್‌ ರಹ್ಮಾನ್ ಮದನಿ, ಕಾಪು ಖಾಝಿ ಪಿ.ಬಿ. ಅಹ್ಮದ್ ಮುಸ್ಲಿಯಾರ್, ಮಸೀದಿಯ ಖತೀಬ್ ಎಂ.ಕೆ. ಅಬ್ದುಲ್ ರಶೀದ್ ಸಖಾಫಿ ಅಲ್ ಕಾಮಿಲ್, ಸುನ್ನೀ ಸಂಯುಕ್ತ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾವ ಹಾಜಿ ಮುಳೂರು, ಗೌರವ ಅಧ್ಯಕ್ಷರು ಬಿಜೆಎಂ ಮಜೂರು ಹಾಜಿ ಮೋನು ಕರಂದಾಡಿ, ಉದ್ಯಮಿಗಳಾದ ಫೀರ್ ಸಾಹೇಬ್ ಉಡುಪಿ, ಯು.ಎ. ರಶೀದ್ ಕಟಪಾಡಿ, ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ, ನಮ್ಮ ನಾಡ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಯಹ್ಯಾನಕ್ವಾ, ಜಿಲ್ಲಾ ಉಪಾಧ್ಯಕ್ಷ ಶಫಿ ಅಹಮದ್ ಖಾಝಿ, ಕರಂದಾಡಿ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಪದ್ಮನಾಭ ಶ್ಯಾನುಭಾಗ್, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಕೆ. ವಾಸುದೇವ ರಾವ್ ಕರಂದಾಡಿ, ಶೇಖ್ ವಹೀದ್ ದಾವೂದ್, ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೋಕ್ತೆಸರ ರವಿರಾಜ್ ಶೆಟ್ಟಿ ಪಂಜಿತ್ತೂರು, ಮಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ ಕುಮಾರ್ ಕರಂದಾಡಿ, ವಾಸುದೇವ ರಾವ್, ಶಿರ್ವ ಗ್ರಾಮ ಪಂಚಾಯಿತಿಯ ರತನ್ ಶೆಟ್ಟಿ, ಶರ್ಪುದ್ದೀನ್ ಶೇಖ್, ಉದ್ಯಮಿ ದೀಪಕ್ ಕುಮಾರ್ ಎರ್ಮಾಳು, ಹಾಜಬ್ಬ ಅಭಿಮಾನ್ ಗೋಲ್ಡ್, ಮಜೂರು ಹೆಲ್ಪ್‌ಲೈನ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್, ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಶಿರ್ವ ಸುನ್ನೀ ಜಾಮಿಯಾ ಮಸೀದಿ ಅಧ್ಯಕ್ಷ ಜುಬೈರ್ ಅಹ್ಮದ್, ತಖ್ವೀಯತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಬ್ದುಲ್ ರಹೀಂ, ಸ್ವಲಾತ್ ಸಮಿತಿ ಕೊಂಬಗುಡ್ಡೆ ಅಧ್ಯಕ್ಷ ಬಾವ ಶೌಕತ್ ಅಲಿ, ಮುಳೂರು ಸುನ್ನೀ ಸೆಂಟರ್ ಮ್ಯಾನೇಜರ್ ಯು.ಕೆ. ಮುಸ್ತಫಾ ಸಅದಿ ಭಾಗವಹಿಸಿದ್ದರು.

ಕಾಪು ಸಮೀಪದ ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸ್ಜಿದ್‌ನ ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮದ

ನೋಡ ಬನ್ನಿ ನಮ್ಮ ಮಸೀದಿ

ಮಲ್ಲಾರು-ಮಜೂರಿನ ಬದ್ರಿಯಾ ಜುಮಅ ಮಸೀದಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಮಸೀದಿ ಕಟ್ಟಡ ಹಾಗೂ ಪರಿಸರದ ಸೌಂದರ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ "ನೋಡ ಬನ್ನಿ ನಮ್ಮ ಮಸೀದಿ" ಎಂಬ ವಿಶೇಷ ಕಾರ್ಯಕ್ರಮ ಭಾನುವಾರ ನಡೆಯಿತು.

ಅತ್ಯಾಧುನಿಕ ವಿನ್ಯಾಸ ಅಪೂರ್ವ ಕೆತ್ತನೆಯ ಮಸೀದಿ ಪ್ರವೇಶ ದ್ವಾರ ವಿಶಾಲ ಪ್ರಾರ್ಥನಾ ಮಂದಿರ ಹಾಗೂ ಆಕರ್ಷಕವಾಗಿ ರೂಪುಗೊಂಡ ಮಸೀದಿ ಪರಿಸರ ಎಲ್ಲರ ಗಮನ ಸೆಳೆಯುವಂತಿದೆ. ನೋಡ ಬನ್ನಿ ನಮ್ಮ ಮಸೀದಿ ಎಂಬ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಮಜೂರು ಗ್ರಾಮವು ಗಮನ ಸೆಳೆದಿದೆ. ಮಸೀದಿಯ ಇತಿಹಾಸ ಧಾರ್ಮಿಕ ಮಹತ್ವ ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ಭಾವೈಕ್ಯತೆಯ ಸಂದೇಶವನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.

ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಸೇರಿದಂತೆ ಶಿಸ್ತಿನ ಬಗ್ಗೆ ವಿವರ ನೀಡಲಾಯಿತು. ಹಿಂದೂ ಕ್ರಿಶ್ಚಿಯನ್ ಮಹಿಳೆಯರು ಮಕ್ಕಳು ಎಲ್ಲರಿಗೂ ಮಸೀದಿ ಹಾಗೂ ಪ್ರಾರ್ಥನೆ ಸಂಬAಧ ಇದ್ದ ಎಲ್ಲಾ ವಿಚಾರಗಳ ಕುರಿತು ಮಾಹಿತಿ ನೀಡಲಾಯಿತು. ವಿಶೇಷವಾಗಿ ಮಹಿಳೆಯರು ಮಕ್ಕಳು ಸೇರಿದಂತೆ ಹಲವರು ತಂಡೋಪತAಡವಾಗಿ ಆಗಮಿಸಿ ಮಸೀದಿ ವೀಕ್ಷಣೆ ಮಾಡಿ ತಮ್ಮ ಅನುಭವಗಳನ್ನ ಹೀಗೆ ಹಂಚಿಕೊAಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.