ಹೆಬ್ರಿ: ಜಿಲ್ಲಾ ಮಲೆಕುಡಿಯ ಸಂಘದ ಕಬ್ಬಿನಾಲೆ ಗ್ರಾಮ ಸಮಿತಿಯ ನೂತನ ಸಮಿತಿಗೆ ಕಡತ ಹಸ್ತಾಂತರ ಕಾರ್ಯಕ್ರಮ ಗ್ರಾಮ ಸಮಿತಿ ಅಧ್ಯಕ್ಷ ದಯಾಕರ ಗೌಡ ಬಂಗ್ಲೆಗುಡ್ಡೆ ಅಧ್ಯಕ್ಷತೆಯಲ್ಲಿ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರಾಜು ಗೌಡ ಕುಚ್ಚೂರು, ಉಪಾಧ್ಯಕ್ಷರಾಗಿ ಪ್ರಶಾಂತ್ ಪೀತುಬೈಲು, ಸುಂದರಿ ಹೊಸಮನೆ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಕೊರ್ತಬೈಲು, ಜತೆ ಕಾರ್ಯದರ್ಶಿಯಾಗಿ ಸತೀಶ್ ಮತ್ತಾವು, ಕೋಶಾಧಿಕಾರಿಯಾಗಿ ವಸಂತ ಕೊಳರಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಪುಂಡಾಲು, ರತ್ನ ಬಂಗ್ಲೆಗುಡ್ಡೆ, ಗೌರವ ಸಲಹೆಗಾರರಾಗಿ ನಾರಾಯಣ ಅಲಂಗಾಡು, ದಯಾಕರ ಗೌಡ ಬಂಗ್ಲೆಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಠಲ ಗೌಡ ಮುಡ್ಲಾಂತ್, ಹರೀಶ್ ಸಂಪಿಗೆ ದರ್ಖಾಸು ಆಯ್ಕೆಯಾದರು.
ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಮನೋಹರ ಪುಂಡಾಲು, ವಕ್ತಾರೆ ಸುಜಾತ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷರಾದ ಮೇಲ್ಮಟ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಪುಂಡಾಲು, ನೂತನ ಅಧ್ಯಕ್ಷ ರಾಜು ಗೌಡ, ಪ್ರಧಾನ ಕಾರ್ಯದರ್ಶಿ ಶಶಿಧರ್ ಇದ್ದರು. ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.