
ಉಡುಪಿ: ತುಳುಕೂಟ ಉಡುಪಿ ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 24ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯಲ್ಲಿ ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಸುಮನಸಾ ಕೊಡವೂರು ತಂಡದ ‘ಯೇಸ’ ನಾಟಕ ಪಡೆದುಕೊಂಡಿದೆ.
ಸಂಗಮ ಕಲಾವಿದರು ಮಣಿಪಾಲ ತಂಡದ ‘ಮಾಯೊಕದ ಮಣ್ಣಕರ’ ನಾಟಕ ದ್ವಿತೀಯ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಹಾಗೂ ಮುಂಬಯಿಯ ರಂಗಮಿಲನ ತಂಡದ ‘ನಾಗ ಸಂಪಿಗೆ’ ನಾಟಕ ತೃತೀಯ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿತು.
ಶ್ರೇಷ್ಠ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದ ಯೇಸ ನಾಟಕದ ನಿರ್ದೇಶಕ ವಿದ್ದು ಉಚ್ಚಿಲ್ ಅವರಿಗೆ ಪ್ರಥಮ, ಸಂಗಮ ಕಲಾವಿದರು ಮಣಿಪಾಲ ತಂಡದ ಮಾಯಕೊದ ಮಣ್ಣಕರ ನಾಟಕದ ನಿರ್ದೇಶಕ ರಮೇಶ್ ಕೆ. ಬೆಣಕಲ್ ಅವರಿಗೆ ದ್ವಿತೀಯ ಮತ್ತು ಮುಂಬಯಿ ರಂಗಮಿಲನ ತಂಡದ ನಾಗಸಂಪಿಗೆ ನಾಟಕದ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಅವರಿಗೆ ತೃತೀಯ ಸ್ಥಾನ ಲಭಿಸಿದೆ.
ಶ್ರೇಷ್ಠ ರಂಗಪರಿಕರ/ಪ್ರಸಾದನದಲ್ಲಿ ಸಂಗಮ ಕಲಾವಿದೆರ್ ಮಣಿಪಾಲ ಪ್ರಥಮ, ಸುಮನಸಾ ಕೊಡವೂರು ದ್ವಿತೀಯ, ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತೃತೀಯ ಸ್ಥಾನ ಪಡೆದಿದೆ.
ಶ್ರೇಷ್ಠ ಬೆಳಕಿನಲ್ಲಿ ಯೇಸ ನಾಟಕದ ನಿಖಿಲ್ ಮೈಂದನ್ ಪ್ರಥಮ, ನೆಲ ನೀರ್‌ದ ದುನಿಪು ನಾಟಕದ ಪ್ರಥ್ವಿನ್ ಕೆ. ಉಡುಪಿ ದ್ವಿತೀಯ, ನಾಗ ಸಂಪಿಗೆ ನಾಟಕದ ನಿತಿನ್ ಪೆರಂಪಳ್ಳಿ ತೃತೀಯ ಸ್ಥಾನಿಯಾಗಿದ್ದಾರೆ.
ಶ್ರೇಷ್ಠ ಸಂಗೀತದಲ್ಲಿ ಯೇಸ ನಾಟಕದ ಶೋಧನ್ ಎರ್ಮಾಳ್ ಪ್ರಥಮ, ಮಾಯೊಕದ ಮಣ್ಣಕರ ನಾಟಕದ ಶುಭಕರ ಪುತ್ತೂರು ದ್ವಿತೀಯ, ನಾಗ ಸಂಪಿಗೆ ನಾಟಕದ ದಿವಾಕರ್ ಕಟೀಲ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ನಟರಾಗಿ ಮಾಯೊಕದ ಮಣ್ಣಕರ ನಾಟಕದ ಅಡ್ಕ ಪಾತ್ರಧಾರಿ ಸಂತೋಷ್ ಶೆಟ್ಟಿ ಹಿರಿಯಡ್ಕ ಪ್ರಥಮ, ಮುಗಿಯಂದಿ ಕಥೆ ನಾಟಕದ ವಿಜಯ ಪಾತ್ರಧಾರಿ ಮಂಜುನಾಥ್ ಆಚಾರ್ಯ ಕುಂಜೂರು ದ್ವಿತೀಯ,ಯೇಸ ನಾಟಕದ ಸಜ್ಜನ ಹೇಮಂತ್ ಪಾತ್ರಧಾರಿ ಕಿರಣ್ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ನಟಿಯಾಗಿ ಯೇಸ ನಾಟಕದ ಸತ್ಯಶ್ರೀ ಪಾತ್ರಧಾರಿಣಿ ಸೌಭಾಗ್ಯ ಲಕ್ಷ್ಮೀ ಪ್ರಥಮ, ಮಗಿಯಂದಿ ಕಥೆ ನಾಟಕದ ಕುಸುಮಾ ಪಾತ್ರಧಾರಿಣಿ ಕುಸುಮಾ ಕಾಮತ್ ಕರ್ವಾಲ್ ದ್ವಿತೀಯ, ಮಯೊಕದ ಮಣ್ಣಕರ ನಾಟಕದ ಮುಡ್ಕ ಪಾತ್ರಧಾರಿಣಿ ವೈಷ್ಣವಿ ಭಂಡಾರ್ಕರ್ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.