ADVERTISEMENT

ಅಮೃತೇಶ್ವರಿ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:38 IST
Last Updated 1 ಜೂನ್ 2025, 12:38 IST
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ ಸಿ ಕುಂದರ್ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯವನ್ನು ಕಾಡ್೯ನ್ನು ಹಸ್ತಾಂತರಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ ಸಿ ಕುಂದರ್ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯವನ್ನು ಕಾಡ್೯ನ್ನು ಹಸ್ತಾಂತರಿಸಿದರು.   

ಕೋಟ (ಬ್ರಹ್ಮಾವರ): ಕೋಟ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ತಿರುಗಾಟದ ಕೊನೆಯ ಸೇವೆಯಾಟ ಶುಕ್ರವಾರ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್ ಅವರು ಮೇಳದ ಕಲಾವಿದರಿಗೆ ವಿಮಾ ಸೌಲಭ್ಯದ ಕಾರ್ಡ್ ಹಸ್ತಾಂತರಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಶಿವ ಪೂಜಾರಿ, ಗಣೇಶ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಕೋಟ ಸುರೇಶ, ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ, ಕಲಾವಿದ ಜಗದೀಶ ಹೆಗಡೆ, ಮಾಧವ ನಾಗೂರು, ದೇವಸ್ಥಾನದ ವ್ಯವಸ್ಥಾಪಕ ಗಣೇಶ್ ಹೊಳ್ಳ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.