ADVERTISEMENT

ಕೋಟ: ಅಷ್ಟಮಿಯ ಓಕುಳಿಯಾಟ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 3:04 IST
Last Updated 18 ಆಗಸ್ಟ್ 2025, 3:04 IST
ಕೋಟ ಜಿ.ಎಸ್‌.ಬಿ ಸಮಾಜ ಬಾಂಧವರಿಂದ ಅಷ್ಟಮಿಯ ಪ್ರಯುಕ್ತ ರಂಗಿನ ಓಕುಳಿಯಾಟ ನಡೆಯಿತು
ಕೋಟ ಜಿ.ಎಸ್‌.ಬಿ ಸಮಾಜ ಬಾಂಧವರಿಂದ ಅಷ್ಟಮಿಯ ಪ್ರಯುಕ್ತ ರಂಗಿನ ಓಕುಳಿಯಾಟ ನಡೆಯಿತು   

ಕೋಟ(ಬ್ರಹ್ಮಾವರ): ಕೋಟದ ಕಾಶೀಮಠ ಮುರುಳೀಧರಕೃಷ್ಣ ಮಾರುತಿ ದೇವಸ್ಥಾನದಲ್ಲಿ ಅಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ, ಭಜನಾ ಸಪ್ತಾಹ ಭಾನುವಾರ ನಡೆಯಿತು.

ಧಾರ್ಮಿಕ ವಿಧಿವಿಧಾನದ ಬಳಿಕ, ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಣ್ಣ ಬಣ್ಣದ ರಂಗಿನ ಓಕುಳಿಯಾಟ ಗಮನ ಸೆಳೆಯಿತು.

ಕೋಟದ ಹೆದ್ದಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಜಿ.ಎಸ್‌.ಬಿ ಸಮುದಾಯ ಬಾಂಧವರು ಬಣ್ಣಬಣ್ಣದ ನೀರನ್ನು ಶೇಖರಿಸಿಕೊಂಡು ಬಂದು, ಒಬ್ಬರಿಗೆ ಒಬ್ಬರೂ ಎರೆಚಿಕೊಳ್ಳುವ ದೃಶ್ಯ ಕಂಡು ಬಂತು.

ADVERTISEMENT

ಈ ಸಂದರ್ಭ ಕೋಟದ ಕಾಶೀಮಠದ ವೇ.ಮೂ ದೇವದತ್ತ ಭಟ್, ಕಪಿಲದಾಸ್ ಭಟ್, ಸಮುದಾಯದ ಪ್ರಮುಖರಾದ ರಮೇಶ ಪಡಿಯಾರ್, ನರಸಿಂಹ ಪ್ರಭು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.