ADVERTISEMENT

ಕೋಟ: ಮನೆಗಳಿಗೆ ನುಗ್ಗಿದ ನೀರು

ಕೋಟ ಪರಿಸರದಲ್ಲಿ ಮುಂದುವರಿದ ಮಳೆರಾಯನ ಅಬ್ಬರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:14 IST
Last Updated 7 ಜುಲೈ 2022, 4:14 IST
ಕೋಟ ಬನ್ನಾಡಿ ಪರಿಸರದಲ್ಲಿ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ
ಕೋಟ ಬನ್ನಾಡಿ ಪರಿಸರದಲ್ಲಿ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ   

ಕೋಟ(ಬ್ರಹ್ಮಾವರ): ಕೋಟ ಪರಿಸರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಉಪ್ಲಾಡಿ, ಬೆಟ್ಲಕ್ಕಿ, ಬನ್ನಾಡಿ ಪರಿಸರದಲ್ಲಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿದ ಪರಿಣಾಮ ಜನರು ಭಯದಿಂದ ರಾತ್ರಿ ಕಳೆಯುವಂತಾಯಿತು.

ಬುಧವಾರ ಬೆಳಿಗ್ಗೆಯೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿನೆರೆ ನೀರು ಸುತ್ತುವರಿದ ಮನೆಗಳಿಂದ ಸ್ಥಳೀಯರ ರಕ್ಷಣಾಕಾರ್ಯ ಕೈಗೊಂಡರು. ಪರಿಸರದಲ್ಲಿ ಬುಧವಾರಮಳೆಯ ಪ್ರಮಾಣ ಕಡಿಮೆ ಆಗಿತ್ತು. ಪ್ರವಾಹದ ಭೀತಿ ಕಡಿಮೆಯಾಗಿದೆ. ಬ್ರಹ್ಮಾವರ ಸುತ್ತಮುತ್ತ ಕೂಡಾ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಸೀತಾನದಿ ಮತ್ತು ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದರೂ
ಅಪಾಯದ ಮಟ್ಟದಿಂದ ಕೆಳಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT