ಪೆರ್ಡೂರಿನ ಹರ್ಷಿತ್ ಮತ್ತು ತಂಡದವರು ಶ್ರೀಕೃಷ್ಣ ಜನ್ಮಾಷ್ಠಮಿಯಂದು ವೇಷ ಧರಿಸಿ ಗಳಿಸಿದ ಹಣವನ್ನು ವಿದ್ಯಾರ್ಥಿಯ ಚಿಕಿತ್ಸೆಗೆ ನೀಡಿದರು
ಹೆಬ್ರಿ: ಪೆರ್ಡೂರಿನ ಹರ್ಷಿತ್ ಮತ್ತು ತಂಡದವರು ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸಿ ಗಳಿಸಿದ ₹1,00,315 ಹಣವನ್ನು ಹಿರಿಯಡ್ಕದ ಕಾಲೇಜು ವಿದ್ಯಾರ್ಥಿಯ ಚಿಕಿತ್ಸೆಗೆ ನೀಡಿದರು.
ಹರ್ಷಿತ್ ಅಣ್ಣ ಶಾಶ್ವತ್ ಅಂಗವೈಕಲ್ಯ ಹೊಂದಿದ್ದರೂ ಮತ್ತೊಬ್ಬರ ಬಾಳಿಗೆ ಬೆಳಕಾಗಲು 4 ವರ್ಷಗಳಿಂದ ವೇಷ ಧರಿಸಿ ಬಂದ ಹಣವನ್ನು ಊರಿನ ಆಸುಪಾಸಿನಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ವೈದ್ಯಕೀಯ ನೆರವಿಗೆ ನೀಡುತ್ತಿದ್ದಾರೆ. ತಂಡಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಪೆರ್ಡೂರು ಗ್ರಾಮ ಪಂಚಾಯತಿ ಸದಸ್ಯ ಕೆ. ತುಕಾರಾಮ ನಾಯಕ್, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕುಶಾಲ್ ನಾಯ್ಕ್, ತಂಡದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.