
ಕಾರ್ಕಳ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಕಾರ್ಕಳ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ 2 ದಿನಗಳ ಕ್ರಿಕೆಟ್ ಟೂರ್ನಿಯಲ್ಲಿ ಕಾಸರಗೋಡು ವೀರ ಶಿವಾಜಿ ಆದೂರು ಪ್ರಥಮ ಸ್ಥಾನ ಪಡೆಯಿತು.
ಗ್ರೇಟ್ ಮರಾಠ ಕಾರ್ಕಳ ತಂಡ ದ್ವಿತೀಯ, ಮರಾಠ ಆರ್ಯನ್ಸ್ ಮಂಗಳೂರು ತೃತೀಯ, ಎ.ಬಿ.ಜಿ.ಟಿ ಮಂಗಳೂರು ಚತುರ್ಥ ಸ್ಥಾನ ಪಡೆದವು. ಬಾಲಕರ ವಿಭಾಗದಲ್ಲಿ ಗ್ರೇಟ್ ಮರಾಠ ಕಾರ್ಕಳ ಪ್ರಥಮ, ಕ್ಷತ್ರಿಯ ಮರಾಠ ಸಮಾಜ ದ್ವಿತೀಯ ಸ್ಥಾನ ಪಡೆದವು.
ಮಹಿಳೆಯರ ಥ್ರೋಬಾಲ್ ಟೂರ್ನಿಯಲ್ಲಿ ಮರಾಠ ಯುವನ್ಸ್ ಬೆಳ್ತಂಗಡಿ ಪ್ರಥಮ, ಛತ್ರಪತಿ ಪಡೀಲ್ ಮಂಗಳೂರು ದ್ವಿತೀಯ, ಗ್ರೇಟ್ ಮರಾಠ ಕಾರ್ಕಳ ತೃತೀಯ, ಕ್ಷತ್ರಿಯ ಮರಾಠ ಸಮಾಜ ಕಾರ್ಕಳ ಚತುರ್ಥ ಸ್ಥಾನ ಪಡೆದವು.
ಸಂಸ್ಥೆಯ ಅಧ್ಯಕ್ಷ ಶುಭದ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು, ಶಾಶ್ವತ ಫಲಕ, ಪದಕಗಳನ್ನು ವಿತರಿಸಲಾಯಿತು. ಎಲ್ಲಾ ವಿಭಾಗಳಲ್ಲಿ ವೈಯಕ್ತಿಕ ಪ್ರಶಸ್ತಿ, ಭಾಗವಹಿಸಿದ ತಂಡಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಉಮೇಶ್ ರಾವ್ ಮೋರೆ ಬಜಗೋಳಿ, ಗಿರೀಶ್ ರಾವ್ ಮೋರೆ, ನವೀನ್ ರಾವ್ ಸುರೈ, ದಿನೇಶ್ ಶೆಟ್ಟಿ, ಹರಿಶ್ಚಂದ್ರ ರಾವ್ ಪವಾರ್, ಹರೀಶ್ ಮೋರೆ, ಶಿವಾಜಿ ಜಾದವ್, ಪ್ರಕಾಶ್ ಜಾದವ್, ಗಣೇಶ್ ಮುಂಡ್ಕೂರು, ದಯಾನಂದ ಶಿಂಧೆ, ವಿರೇಂದ್ರ ರಾವ್, ಹರೀಶ್ ಸಾಣೂರು, ಪಾಂಡು ಸಾಣೂರು, ಪ್ರಕಾಶ್ ಕವಡೆ ಜನ್ನೋಜಿರಾವ್ ಮುಂಡ್ಕೂರು, ರಾಜೇಶ್ ರಾವ್ ಪರಪ್ಪು, ಸಂತೋಷ್ ರಾವ್ ಜೋಡುರಸ್ತೆ, ಕೀರ್ತನ್ ಲಾಡ್, ಹರೀಶ್ ಸಾಣೂರು, ರಾಮಚಂದ್ರ ರಾವ್, ಗಣೇಶ್ ಕವಡೆ, ಭಾಗವಹಿಸಿದ್ದರು. ದಿವ್ಯಾ ಹರೇಂದ್ರ ಸ್ವಾಗತಿಸಿದರು. ಪ್ರಸನ್ನ ರಾವ್ ವಂದಿಸಿದರು. ಆಶಾಲತಾ ಗಿರೀಶ್ ಕವಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.