ADVERTISEMENT

‘‘ಟಿ.ವಿ, ಮೊಬೈಲ್‌ನಿಂದ ಧಾರ್ಮಿಕತೆಗೆ ಧಕ್ಕೆ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:06 IST
Last Updated 11 ಡಿಸೆಂಬರ್ 2025, 4:06 IST
ರಾಷ್ಟ್ರಮಟ್ಟದ ಕ್ರೀಡಾಪಟು ಧನ್ವಿತ್ ಶೆಟ್ಟಿ ಪರವಾಗಿ ತಂದೆ– ತಾಯಿ ಸುಧಾಕರ ಶೆಟ್ಟಿ, ಶುಭದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
ರಾಷ್ಟ್ರಮಟ್ಟದ ಕ್ರೀಡಾಪಟು ಧನ್ವಿತ್ ಶೆಟ್ಟಿ ಪರವಾಗಿ ತಂದೆ– ತಾಯಿ ಸುಧಾಕರ ಶೆಟ್ಟಿ, ಶುಭದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು   

ಹೆಬ್ರಿ: ‘ಇಂದು ಟಿ.ವಿ ಮೊಬೈಲಿನಿಂದಾಗಿ ಧಾರ್ಮಿಕತೆಗೆ ಭಾರಿ ಹಿನ್ನಡೆಯಾಗಿದೆ. ಧಾರ್ಮಿಕ ಕಾರ್ಯಕ್ರಮ ನಡೆಯುವಾಗ ಯುವಜನರು ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಕಂಬಳ, ದೈವಾರಾಧನೆ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು. 

ಅವರು ಮಂಗಳವಾರ ನಡೆದ ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿಯ ಸಾಂಪ್ರದಾಯಿಕ ಕುಚ್ಚೂರು ಕಂಬಳದ ಸಮಾರೋಪದಲ್ಲಿ ಮಾತನಾಡಿ, ಕುಚ್ಚೂರಿನಲ್ಲಿ ಸರ್ವರ ಸಹಕಾರದಿಂದ ಪರಂಪರೆ ಉಳಿಸಿ ಬೆಳೆಸುವ ಕೆಲಸ ಆಗುತ್ತಿದೆ ಎಂದು ಶ್ಲಾಘಿಸಿದರು.

ರಾಷ್ಟ್ರಮಟ್ಟದ ಕ್ರೀಡಾಪಟು ಧನ್ವಿತ್ ಎಸ್. ಶೆಟ್ಟಿ ಪರವಾಗಿ ಪೋಷಕರಾದ ದೇವಳಬೈಲು ಸುಧಾಕರ ಶೆಟ್ಟಿ, ಶುಭದ ಶೆಟ್ಟಿ ಸನ್ಮಾನ ಸ್ವೀಕರಿಸಿದರು. ಕಂಬಳದ ವಿವಿಧ ವಿಭಾಗದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಚ್ಚೂರು ಕಂಬಳ ಕ್ರೀಡಾ ಸಮಿತಿ ಅಧ್ಯಕ್ಷ ನಿತ್ಯಾನಂದ ಭಟ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮಹೇಶ ಶೆಟ್ಟಿ ಬಾದ್ಲು, ಶಾಂತರಾಮ ಶೆಟ್ಟಿ ಬಾರ್ಕೂರು, ಉದ್ಯಮಿಗಳಾದ ಬಿ. ಹರ್ಷ ಶೆಟ್ಟಿ, ಗಣನಾಥ ಹೆಗ್ಡೆ, ಸತೀಶ್ ಶೆಟ್ಟಿ ಜಾರ್ಮಕ್ಕಿ, ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷ ಕಿರಣ್ ತೋಳಾರ್, ಕಂಬಳ ಕ್ರೀಡಾ ಸಮಿತಿ  ಪ್ರಮುಖರಾದ ರಮೇಶ ಪೂಜಾರಿ, ಅಣ್ಣಯ್ಯ ಅಂಬಿಗ, ಊರಿನ ಪ್ರಮುಖರು ಭಾಗವಹಿಸಿದ್ದರು. ಮಹೇಶ್ ಶೆಟ್ಟಿ ಬಾದ್ಲು ನಿರೂಪಿಸಿದರು.