ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತಾಪಿ ವರ್ಗಕ್ಕೆ ಅನುಕೂಲವಾಲೆಂದು ಬ್ರಹ್ಮಾವರದಲ್ಲಿ ಮಹತ್ವಾಕಾಂಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗಿತ್ತು ಎಂದು ಕಮಲಶಿಲೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ ಹೇಳಿದರು.
ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಉಪಾಧ್ಯಕ್ಷ ಎಸ್.ಸಂಜೀವ ಶೆಟ್ಟಿ ಸಂಪಿಗೇಡಿ ಅವರಿಗ ಭಾನುವಾರ ನಾಗರಿಕ ಸನ್ಮಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಹಡಲು ಭೂಮಿಗಳಿವೆ. ಇಲ್ಲಿ ರೈತರಿಗೆ ಕಬ್ಬು ಬೆಳೆಯಲು ಉತ್ತೇಜನ ನೀಡುವ ಜತೆಗೆ ಸಾಲ ಸೌಲಭ್ಯ ನೀಡುವ ಯೋಜನೆ ಹಾಕಿಕೊಳ್ಳಬೇಕು. ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಸತೀಶ್ ಕಿಣಿ ಬೆಳ್ವೆ ಮತ್ತು ಸಂಪಿಗೇಡಿ ಸಂಜೀವ ಶೆಟ್ಟಿ ಅವರು ಚುನಾಯಿತರಾಗಿರುವುದು ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಸತೀಶ್ ಕಿಣಿ, ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಹಾಗೂ ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು. ಈ ಬಗ್ಗೆ ರೈತರ ಮನೆ ಮನೆಗೆ ಭೇಟಿ ನೀಡಲಾಗುವುದು. ಕಾರ್ಖಾನೆಯ ಅಭಿವೃದ್ಧಿಗಾಗಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಮಾರ್ಗದರ್ಶನವನ್ನು ಪಡೆಯಲಾಗುವುದು ಎಂದರು.
ಉಪಾಧ್ಯಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿದರು. ಸಿದ್ದಾಪುರ ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ ಡಾ.ಶ್ರೀಕಾಂತ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಸನ್ಮಾನ ಸಮಿತಿಯ ಕೋಶಾಧಿಕಾರಿ ಶ್ರೀಕಾಂತ ನಾಯಕ್ ಐರ್‌ಬೈಲ್, ಉಪಾಧ್ಯಕ್ಷರಾದ ಎನ್.ಶೇಖರ್ ಶೆಟ್ಟಿ ಕಡ್ರಿ, ಭರತ್ ಕಾಮತ್ ದಕ್ಕೇರ್‌ಬಾಳು, ನಾರಾಯಣ ಶೆಟ್ಟಿ ಜನ್ಸಾಲೆ, ಯಕ್ಷ ನುಡಿಸಿರಿ ಬಳಗ, ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿ, ಹಿರಿಯ ನಾಗರಿಕರ ವೇದಿಕೆ, ಭಾರತೀಯ ಕಿಸಾನ್ ಸಂಘ, ಭೋಜ ಪೂಜಾರಿ ಚಾರಿಟಬಲ್ ಟ್ರಸ್ಟ್ ಬೆಚ್ಚಳ್ಳಿ, ಕಡ್ರಿ ನಾರಾಯಣ ಮಾಸ್ಟರ್ ಮೆಮೊರಿಯಲ್ ಟ್ರಸ್ಟ್, ಗ್ರಾಮ ವಿಕಾಸ ಸಮಿತಿ, ಶ್ರೀಬನಶಂಕರಿ ಯುವಕ ಮಂಡಲ ಉಳ್ಳೂರು-74 ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ನಾಗರಿಕ ಸನ್ಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ ಉಳ್ಳೂರು ಸ್ವಾಗತಿಸಿದರು, ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ.ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ನಿರೂಪಿಸಿದರು. ಸಮಿತಿಯ ಉಪಾಧ್ಯಕ್ಷ ಕೆ.ಭೋಜ ಶೆಟ್ಟಿ ಕಡ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.