ADVERTISEMENT

ಕುಂದಾಪುರ | ನದಿಹೂಳು ಸಮಸ್ಯೆ: ಸಿಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 3:16 IST
Last Updated 13 ಆಗಸ್ಟ್ 2024, 3:16 IST
ಕುಂದಾಪುರ ಸಮೀಪದ ಉಳ್ತೂರಿನ ಹಾಗೂ ಹೂಳು ತುಂಬಿದ ಪ್ರದೇಶಗಳಿಗೆ ಸೋಮವಾರ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಿಲ್ ಇವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದಾಪುರ ಸಮೀಪದ ಉಳ್ತೂರಿನ ಹಾಗೂ ಹೂಳು ತುಂಬಿದ ಪ್ರದೇಶಗಳಿಗೆ ಸೋಮವಾರ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಿಲ್ ಇವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆದೂರು, ಬೇಳೂರು, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿಗಳಲ್ಲಿ ತುಂಬಿರುವ ಹೂಳಿನಿಂದ ನೆರೆ ಸೃಷ್ಟಿಯಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಸ್ಥಳೀಯರ, ಶಾಸಕರ ಅಹವಾಲಿಗೆ ಸ್ಪಂದಿಸಿದ ಜಿ. ಪಂ. ಸಿಇಒ ಪ್ರತೀಕ್ ಬಾಯಿಲ್ ನೇತೃತ್ವದ ತಂಡ ಸೋಮವಾರ ಹೂಳು ಸಮಸ್ಯೆಯಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳೀಯರ, ಜನಪ್ರತಿನಿಧಿಗಳ ಅಹವಾಲು ಆಲಿಸಿ ಮಾತನಾಡಿದ ಸಿಇಒ, ಸಮಸ್ಯೆಗಳಿರುವ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಆ. 20ರಂದು ಶಾಸಕರು ಕರೆದಿರುವ ವಿಶೇಷ ಸಭೆಯಲ್ಲಿ ಆಯಾ ಭಾಗದ ನದಿ ಸಾಲಿನಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುವ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಎಚ್.ಎಸ್. ಶೋಭಾಲಕ್ಷ್ಮೀ, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ ಕೆ.ಜಿ, ಜಿ.ಪಂ ಸಹಾಯಕ ಕಾರ್ಯದರ್ಶಿ ಪ್ರಶಾಂತ್ ರಾವ್, ನರೇಗಾ ಸಹಾಯಕ ನಿರ್ದೇಶಕ ರಾಜೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕೆದೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಳ್ತೂರು, ಪಿಡಿಒ ಪ್ರಸಾದ್, ಬೇಳೂರು ಗ್ರಾ.ಪಂ. ಅಧ್ಯಕ್ಷ ಜಯಶೀಲ ಶೆಟ್ಟಿ, ಪಿಡಿಒ ಸುನೀಲ್, ತೆಕ್ಕಟ್ಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುನೀಲ್, ಸದಸ್ಯ ಸತೀಶ್ ದೇವಾಡಿಗ, ಸಿಬ್ಬಂದಿ ಮಾಧವ, ಸ್ಥಳೀಯರಾದ ಚಂದ್ರ ಶೆಟ್ಟಿ, ಗೋಪಾಲ ಹಲ್ತೂರು, ಪ್ರತಾಪ್ ಶೆಟ್ಟಿ ಉಳ್ತೂರು, ಜನಸೇವಾ ಟ್ರಸ್ಟ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಬೇಳೂರು, ಸುಕುಮಾರ್ ಶೆಟ್ಟಿ ದೇಲಟ್ಟು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.