ADVERTISEMENT

ಕುಂದಾಪುರ: ದೀಪೋತ್ಸವದಂದು ಅಪರೂಪದ ಧರ್ಮ ಸಮಾಗಮ

ಕುಂದೇಶ್ವರನಿಗೆ ಫಲ, ಪುಷ್ಪ ಸಮರ್ಪಿಸಿದ ಕ್ರೈಸ್ತ ಧರ್ಮೀಯರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:55 IST
Last Updated 21 ನವೆಂಬರ್ 2025, 6:55 IST
ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರು  ಫಲ, ಪುಷ್ಪ ಸಮರ್ಪಿಸಿದರು
ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರು  ಫಲ, ಪುಷ್ಪ ಸಮರ್ಪಿಸಿದರು   

ಕುಂದಾಪುರ: ಇಲ್ಲಿನ ಶ್ರೀಕುಂದೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಕಾರ್ತಿಕ ಅಮವಾಸ್ಯೆಯ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಹೋಲಿ ರೋಜರಿ ಇಗರ್ಜಿಯ ಸೌಹಾರ್ದ ಸಮಿತಿ ಸದಸ್ಯರು, ಧರ್ಮಗುರುಗಳು ದೇವಾಲಯಕ್ಕೆ ಭೇಟಿ ನೀಡಿ ಫಲ, ಪುಷ್ಪಗಳನ್ನು ಸಮರ್ಪಿಸಿ, ಉತ್ಸವದ ಯಶಸ್ಸಿಗೆ ಶುಭ ಕೋರಿದರು.

ಇಗರ್ಜಿಯ ಅಂತರ್‌ ಧರ್ಮ ಸಮಿತಿಯ ಸಂಯೋಜಕ ಜಾನ್ಸನ್ ಡಿ ಅಲ್ವೇಡಾ, ರೋಜರಿ ಮಾತಾ ಚರ್ಚಿನ ಧರ್ಮಗುರು ಪೌಲ್ಸ್ ರೇಗೊ, ಕಥೊಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ ಅಲೈಡಾ ನೇತೃತ್ವದಲ್ಲಿ ದೇವಸ್ಥಾನಕ್ಕೆ ತೆರಳಿದ ಕ್ರೈಸ್ತ ಧರ್ಮೀಯರು ಅರ್ಚಕರ ಮೂಲಕ ಫಲ–ಪುಷ್ಪ ಸಮರ್ಪಿಸಿದರು.

ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ವಾಸುದೇವ ಯಡಿಯಾಳ, ಅರ್ಚಕರಾದ ರಾಜಶೇಖರ ಮಂಜರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ ಗಾಣಿಗ, ಜಿ.ಎಸ್. ಭಟ್, ಕೆ. ನಾಗರಾಜ ನಾಯ್ಕ, ವಿಠಲ ಕಾಂಚನ್, ದಿನೇಶ್, ಉದಯ ಹವಾಲ್ದಾರ್, ಸೀಮಾ ಚಂದ್ರ ಪೂಜಾರಿ ಅವರು ಸೌಹಾರ್ದ ಸಮಿತಿಯನ್ನು ಸ್ವಾಗತಿಸಿದರು.

ADVERTISEMENT

ದೇವಸ್ಥಾನದ ವತಿಯಿಂದ ಧರ್ಮಗುರು ಪೌಮ್ಸ್ ರೇಗೊ ಅವರನ್ನು ಗೌರವಿಸಲಾಯಿತು. ನ. 25 ಮತ್ತು 26ರಂದು ನಡೆಯುವ ಕುಂದಾಪುರ ರೋಜರಿ ಮಾತಾ ಚರ್ಚ್‌ನ ತೆರಾಲಿ ಹಬ್ಬಕ್ಕೆ ಬರುವಂತೆ ಆಮಂತ್ರಣ ನೀಡಲಾಯಿತು.

ಚರ್ಚ್‌ನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸೌಹಾರ್ದ ಸಮಿತಿಯ ಕಾರ್ಯದರ್ಶಿ ಶಾಂತಿ ಪಿಂಟೊ, ಸೌಹಾರ್ದ ಸಮಿತಿಯ ಸದಸ್ಯ ಬರ್ನಾಡ್ ಡಿಕೋಸ್ತಾ, ಡಾ.ಸೋನಿ ಡಿಕೋಸ್ತಾ, ಶೈಲಾ ಡಿ ಆಲೈಡಾ, ಜೋಸೆಫ್ ಡಿಜೋಜಾ, ಮೈಕಲ್ ಗೊನ್ಸಾಲ್ವಿಸ್, ಆಲ್ವಿನ್ ಆಲ್ವೇಡಾ, ಸಂಗೀತ ಪಾಯ್ಸ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಸತೀಶ್ ಗಾಣಿಗ ಭಾಗವಹಿಸಿದ್ದರು.

ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಅಂತರ್ ಧರ್ಮ ಸಮಿತಿ ಸದಸ್ಯರು, ಶ್ರೀದೇವರ ಪೂಜೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.