
ಪ್ರಜಾವಾಣಿ ವಾರ್ತೆ
ಶಶಾಂಕ ಭಂಡಾರಿ, ಪ್ರಮೋದ ಡಿಸೋಜ
ಉಡುಪಿ: ಕುಂದಾಪುರ ಕಂಡ್ಲೂರು ಪೇಟೆಯ ಕಟಿಂಗ್ ಶಾಪ್‌ನಲ್ಲಿ ಬಿಹಾರ ಮೂಲದ ಬಾಲಕ ನೀಡಿದ ಪ್ರಚೋದನಕಾರಿ ಹೇಳಿಕೆಯ ವಿಡಿಯೊ ಹಂಚಿಕೊಂಡ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಾವ್ರಾಡಿ ಗ್ರಾಮದ ಶಶಾಂಕ ಭಂಡಾರಿ (30), ಉದ್ದಿನಮಕ್ಕಿಯ ಪ್ರಮೋದ ಡಿಸೋಜ (25) ಬಂಧಿತರು.
‘ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಹೇಳಿಕೆಯನ್ನು, ಸಾರ್ವಜನಿಕವಾಗಿ ಪ್ರಚೋದನೆಗೊಳಿಸಿ ಗಲಾಟೆ ಮಾಡುವ ಉದ್ದೇಶದಿಂದ ಆರೋಪಿಗಳು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ’ ಎಂದು ಬಾಲಕನ ತಂದೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಕಟಿಂಗ್ ಶಾಪ್ ಎದುರುಗಡೆ ಜನರು ಗುಂಪುಗೂಡಿ, ಬೆದರಿಕೆ ಹಾಕಿದ್ದಾರೆ ಎಂದು ಕಟಿಂಗ್ ಶಾಪ್ ಮಾಲೀಕ ಪ್ರತಿದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.