ADVERTISEMENT

ಕುಂದಾಪುರ: ‘ಬಡವರ ಕಣ್ಣೀರು ಒರೆಸುವ ಕೆಲಸವಾಗಲಿ’

ಬೀಜಾಡಿ ಮಿತ್ರ ಸಂಗಮ ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:47 IST
Last Updated 4 ಫೆಬ್ರುವರಿ 2023, 5:47 IST
ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಜಿ.ಶಂಕರ್ ಅವರು ಕುಂದಾಪುರ ಸಮೀಪದ ಬೀಜಾಡಿಯಲ್ಲಿ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ರಜತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಜಿ.ಶಂಕರ್ ಅವರು ಕುಂದಾಪುರ ಸಮೀಪದ ಬೀಜಾಡಿಯಲ್ಲಿ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ರಜತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು   

ಕುಂದಾಪುರ: ಹುಟ್ಟು–ಸಾವಿನ ನಡುವೆ ಕೇವಲವಾಗಿ ಬದುಕುವುದಕ್ಕಿಂತ ಸಂಪತ್ತಿನ ಒಂದು ಪಾಲನ್ನು ಬಡವರ ಕಣ್ಣೀರು ಒರೆಸುವ ಕೆಲಸಗಳಿಗೆ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಮಿತ್ರಸಂಗಮದ ಕಾರ್ಯ ಶ್ಲಾಘನೀಯ ಎಂದು ಉಡುಪಿಯ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಬೀಜಾಡಿಯ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವ ಸಮಾರಂಭದ ‘ರಜತ ಪಥ: ನೆರಳು–ಬೆಳಕಿನ ಸಹಯಾನ’ ಕಾರ್ಯಕ್ರಮವನ್ನು ಶುಕ್ರವಾರ ಬೀಜಾಡಿಯ ಮಿತ್ರ ಸೌಧದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಂಬಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಸಂಸ್ಥೆಯ ವೆಬ್‌ಸೈಟ್ ಬಿಡುಗಡೆಗೊಳಿಸಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಿರಿಯ ಕೃಷಿಕ ಬಿ.ಶೇಷಗಿರಿ ಗೋಟ, ಕೋಟಿಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಬೆಟ್ಟಿನ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಕಾರ್ಕಡ ರಾಜು ಪೂಜಾರಿ, ಉದ್ಯಮಿ ಕೆ.ಆರ್.ನಾಯ್ಕ್, ಬೀಜಾಡಿ ಮಠದಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಬಿ.ಜಿ.ನಾಗರಾಜ್, ಮಿತ್ರ ಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್, ಕಾರ್ಯದರ್ಶಿ ರಾಜೇಶ್ ಆಚಾರ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದೀಪಾನಂದ ಉಪಾಧ್ಯಾಯ ಇದ್ದರು.

ADVERTISEMENT

ಬೀಜಾಡಿಯ ಮೂಡು ಶಾಲೆಯ ನಿವೃತ್ತ ಶಿಕ್ಷಕ ಕರುಣಾಕರ್ ಶೆಟ್ಟಿ ವಕ್ವಾಡಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ಗೋವುಗಳನ್ನು ವಿತರಿಸಲಾಯಿತು.

ಸುಷ್ಮಾ ಆಚಾರ್ಯ ಪ್ರಾರ್ಥಿಸಿದರು. ರಜತ ಮಹೋತ್ಸವ ಕಾರ್ಯದರ್ಶಿ ಚಂದ್ರ ಬಿ.ಎನ್ ಸ್ವಾಗತಿಸಿದರು. ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಸ್ತಾವಿಕವಾಗಿ ಮಾತನಾ ಡಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು. ಸ್ಥಾಪಕ ಕಾರ್ಯದರ್ಶಿ ಮಂಜುನಾಥ್ ಬೀಜಾಡಿ ವಂದಿಸಿದರು. ಸುಷ್ಮಾ ಆಚಾರ್ಯ ಬೀಜಾಡಿ ಮತ್ತು ಮಾಧವ ಬೀಜಾಡಿ ಅವರಿಂದ ಸುಗುಮ
ಸಂಗೀತ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.