ADVERTISEMENT

ಕುಂದಾಪುರ: ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅಮೃತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:44 IST
Last Updated 2 ಫೆಬ್ರುವರಿ 2026, 1:44 IST
ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ ನಡೆಯಿತು
ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ ನಡೆಯಿತು   

ಕುಂದಾಪುರ: ‘ಮಾನಂಜೆ ನಾರಾಯಣ ರಾವ್ ಮತ್ತು ಸತ್ಯನಾರಾಯಣ ರಾವ್ ಅವರು ವಿದ್ಯುತ್ ವ್ಯವಸ್ಥೆಯೇ ಇಲ್ಲದ ಆ ಕಾಲದಲ್ಲಿ ತಡರಾತ್ರಿ ತನಕ ಲಾಟನ್‌ ಬೆಳಕಿನಲ್ಲಿ ಶ್ರಮವಹಿಸಿ‌ ಕೆಲಸ‌ ಮಾಡಿದ್ದರಿಂದ ಇಂದು ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ಅಮೃತ ಮಹೋತ್ಸವ ಮೆರುಗು ಹೊತ್ತು ನಿಂತಿದೆ’ ಎಂದು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಹೇಳಿದರು.

ಮಾನಂಜೆ ಕಮಲಶಿಲೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅಮೃತ ಮಹೋತ್ಸವದ ಅಂಗವಾಗಿ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಜರುಗಿದ ಅಮೃತಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಠೇವಣಿ ಇಟ್ಟವರು, ಸಾಲ ಪಡೆದವರಿಗೂ ಸಮಾನ ಗೌರವ ಕೊಡಬೇಕು. ಸಾಲ ಪಡೆದವರು ಸರಿಯಾಗಿ ಮರುಪಾವತಿ‌ ಮಾಡಿದಾಗ ಸಂಸ್ಥೆ ಬೆಳೆಯುತ್ತದೆ ಎಂದರು.

ಚೆಂಡೆ ಬಾರಿಸಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು, ಮಾನಂಜೆ ವ್ಯವಸಾಯ ಸೇವಾ ಸಹಕಾರ‌ ಸಂಘ ಸದೃಢವಾಗಿ ಬೆಳೆದಿದೆ. ಇದರ ವ್ಯಾಪ್ತಿಗೆ ಬರುವ ನಾಲ್ಕು ಗ್ರಾಮದ ರೈತರು ಆರ್ಥಿಕವಾಗಿ ಬೆಳೆದಿದ್ದಾರೆ. ವಾಣಿಜ್ಯ ಬ್ಯಾಂಕ್‌ಗಳನ್ನು ಮೀರಿ ಕೃಷಿ‌ಪತ್ತಿನ ಸಹಕಾರ‌ ಸಂಘಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೆಳೆಯುತ್ತಿವೆ ಎಂದರು.

ADVERTISEMENT

ಸಂಘದ ಪ್ರಧಾನ ಕಚೇರಿ ಎದುರು ನಿರ್ಮಿಸಿದ ಬಸ್ ಪ್ರಯಾಣಿಕರ‌ ತಂಗುದಾಣ ಉದ್ಘಾಟಿಸಿ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ, ಸಂಸ್ಥೆಯೊಂದು ಜನರ ವಿಶ್ವಾಸ ಗಳಿಸುತ್ತಾ ತಾನು ಬೆಳೆದು ತನ್ನ‌ ಸದಸ್ಯರನ್ನು ಬೆಳೆಸುತ್ತಾ ಹೋದಾಗ ಉತ್ತಮ ಸಂಸ್ಥೆ ಎನಿಸಿಕೊಳ್ಳುತ್ತದೆ‌ ಎಂದರು‌.

ಸೊಸೈಟಿ ಅಧ್ಯಕ್ಷ ಪ್ರದೀಪ್ ಯಡಿಯಾಳ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಮಹೇಶ್ ಹೆಗ್ಡೆ ಮೊಳಹಳ್ಳಿ, ನಿತ್ಯಾನಂದ ಮುಂಡೋಡಿ, ಪದ್ಮರಾಜ್, ರವಿರಾಜ ಹೆಗ್ಡೆ, ಸುಧೀರ್ ಕುಮಾರ್ ಜೆ, ಜಯಕರ ಶೆಟ್ಡಿ ಇಂದ್ರಾಳಿ, ಮುಕಾಂಬು ಶೆಟ್ಟಿ, ಮಂಜುನಾಥ ಶೆಟ್ಟಿ, ಸುಮತಿ ಗಾಣಿಗ, ರಾಘವೇಂದ್ರ ರಾವ್, ಶಂಕರನಾರಾಯಣ ಯಡಿಯಾಳ, ರಾಮಕೃಷ್ಣ ರಾವ್, ಜಗದೀಶ್ ಯಡಿಯಾಳ, ಜಯರಾಮ ಯಡಿಯಾಳ, ವಾಸುದೇವ ಯಡಿಯಾಳ, ಬಾಲಚಂದ್ರ ಭಟ್, ಮಾನಂಜೆ ಸೊಸೈಟಿ ನಿರ್ದೇಶಕರಾದ ಮಾದವ ಶೆಣೈ, ದೇವದಾಸ ಶೆಟ್ಟಿ, ಮಂಜುನಾಥ ರಾವ್, ವಿಷ್ಣುಮೂರ್ತಿ, ಅನಿತಾ, ರೋಹಿಣಿ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ, ಗುರುರಾಜ ನಾಯ್ಕ, ಸಹಮತ ನಿರ್ದೇಶಕರಾದ ವಿನೋದ, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಸಂಘದ ಪ್ರಧಾನ ಕಚೇರಿವರೆಗೆ ಚೆಂಡೆ ವಾದನ, ಗೊಂಬೆ ಕುಣಿತ, ಕೀಲು ಕುದುರೆಯೊಂದಿಗೆ ಮೆರವಣಿಗೆ ನಡೆಯಿತು. ಉಪಾಧ್ಯಕ್ಷ ಸುದೀಪ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ. ಮಂಜುನಾಥ ನಾಯ್ಕ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.