ADVERTISEMENT

ಹೆಬ್ರಿ: ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 12:55 IST
Last Updated 1 ಡಿಸೆಂಬರ್ 2023, 12:55 IST
ಹೆಬ್ರಿ ಸಮೀಪದ ಮುನಿಯಾಲು ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ಗುರುವಾರ ನಡೆಯಿತು
ಹೆಬ್ರಿ ಸಮೀಪದ ಮುನಿಯಾಲು ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ಗುರುವಾರ ನಡೆಯಿತು   

ಹೆಬ್ರಿ: ಮುನಿಯಾಲು ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಗುರುವಾರ ನಡೆಯಿತು.

ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯು ಬೆಳ್ಳಿಪಲ್ಲಕ್ಕಿಯಲ್ಲಿ ಧಾತ್ರಿ ಕಟ್ಟೆಗೆ ಬಂದು ಪೂಜೆಯ ಬಳಿಕ ಭೂರಿ ಸಮಾರಾಧನೆ ನೆರವೇರಿತು. 

ರಾತ್ರಿ ರಂಗಪೂಜೆಯ ಬಳಿಕ ಬೆಳ್ಳಿ ಮಂಟಪದಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ಅಹೋ ರಾತ್ರಿ ಪುರ ಮೆರವಣಿಗೆ ಮತ್ತು ಕಟ್ಟೆ ಪೂಜೆ ನೆರವೇರಿತು. ಅವಭೃತ ಸ್ನಾನದೊಂದಿಗೆ ಸಂಪನ್ನಗೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.