ADVERTISEMENT

‘ಲವ - ಕುಶ’ ಜೋಡುಕರೆ ಕಂಬಳ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:29 IST
Last Updated 11 ಜನವರಿ 2023, 7:29 IST
ಕಾರ್ಕಳ ತಾಲ್ಲೂಕಿನ ಮಿಯ್ಯಾರು ಲವ–ಕುಶ ಜೋಡುಕರೆ ಬಯಲು ಕಂಬಳದಲ್ಲಿ ಸ್ಪರ್ಧೆಯ ದೃಶ್ಯ
ಕಾರ್ಕಳ ತಾಲ್ಲೂಕಿನ ಮಿಯ್ಯಾರು ಲವ–ಕುಶ ಜೋಡುಕರೆ ಬಯಲು ಕಂಬಳದಲ್ಲಿ ಸ್ಪರ್ಧೆಯ ದೃಶ್ಯ   

ಕಾರ್ಕಳ: ತಾಲ್ಲೂಕಿನ ಮಿಯ್ಯಾರು ಕಂಬಳ ಸಮಿತಿ ಮತ್ತು ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾದ 19ನೇ ವರ್ಷದ ಮಿಯ್ಯಾರು ಲವ–ಕುಶ ಜೋಡುಕರೆ ಬಯಲು ಕಂಬಳದಲ್ಲಿ ಕೂಟದಲ್ಲಿ 264 ಜೊತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶ ವಿವರ: ಕನೆಹಲಗೆ– 1. ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ, 2. ಬಾರ್ಕೂರು ಶಾಂತಾರಾಮ ಶೆಟ್ಟಿ, ಹಲಗೆ ಮುಟ್ಟಿದವರು– ಬೈಂದೂರು ರಾಘವೇಂದ್ರ ಪೂಜಾರಿ.

ಅಡ್ಡ ಹಲಗೆ– 1. ನಾರಾವಿ ಯುವರಾಜ್ ಜೈನ್, ಹಲಗೆ ಮುಟ್ಟಿದವರು– ಭಟ್ಕಳ ಹರೀಶ್, 2. ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ‘ಎ‘, ಹಲಗೆ ಮುಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ.

ADVERTISEMENT

ಹಗ್ಗ ಹಿರಿಯ– 1. ನಂದಳಿಕೆ ಶ್ರೀಕಾಂತ್ ಭಟ್ ‘ಎ‘, ಓಡಿಸಿದವರು– ಪಟ್ಟೆ ಗುರುಚರಣ್, 2. ಕಾರ್ಕಳ ಜೀವಂದಾಸ್ ಅಡ್ಯಂತಾಯ ‘ಎ‘, ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ಹಗ್ಗ ಕಿರಿಯ– 1. ಮಿಯಾರ್ ಹಿನಪಾಡಿ ಜಿನರಾಜ್ ಪಡಿವಾಳ್ ‘ಬಿ‘, ಓಡಿಸಿದವರು– ಭಟ್ಕಳ ಶಂಕರ್, 2. ನಕ್ರೆ ಮಹೋದರ ನಿವಾಸ ಇಶಾನಿ ನಾರಾಯಣ ಭಂಡಾರಿ, ಓಡಿಸಿದವರು– ಪಣಪಿಲ ಪ್ರವೀಣ್ ಕೋಟ್ಯಾನ್.

ನೇಗಿಲು ಹಿರಿಯ– 1. ಮುಡಾರು ರಾಮೇರಗುತ್ತು ಹಾರ್ದಿಕ್ ಹರ್ಷ
ವರ್ಧನ ಪಡಿವಾಳ್, ಓಡಿಸಿದವರು– ಬೈಂದೂರು ವಿವೇಕ್ ಪೂಜಾರಿ, 2. ನಲ್ಲೂರು ಮೇಗಿನಮನೆ ಆಶಿಕ್ ದಿವಾಕರ ಶೆಟ್ಟಿ ‘ಬಿ‘, ಓಡಿಸಿದವರು– ನಕ್ರೆ ಪವನ್ ಮಡಿವಾಳ್.

ನೇಗಿಲು ಕಿರಿಯ– 1. ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಓಡಿಸಿದವರು– ಪಟ್ಟೆ ಗುರುಚರಣ್, 2. ಪಣೋಲಿಬೈಲು ಭಂಡಾರದಮನೆ ಶಿವಾನಂದ ಕುಲಾಲ್, ಓಡಿಸಿದವರು– ಪಣಪಿಲ ಪ್ರವೀಣ್ ಕೋಟ್ಯಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.