ಉಡುಪಿ: ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಅಳಿಯ.
ಕಾರ್ಕಳದ ದಿ.ಪಿಲಿಪ್ಸ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ಅವರ ಪುತ್ರಿ ಪ್ರಫುಲ್ಲ ಮಿನೇಜಸ್ ಅವರನ್ನು ಹರ್ಜಿಂದರ್ ಸಿಂಗ್ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ದೆಹಲಿಯಲ್ಲಿ ನೆಲೆಸಿದ್ದ ಹರ್ಜಿಂದರ್ ಸಿಂಗ್ ಹಾಗೂ ಪ್ರಫುಲ್ಲ ಮೂರ್ನಾಲ್ಕು ವರ್ಷಗಳ ಹಿಂದೆ ಕಾರ್ಕಳಕ್ಕೆ ಭೇಟಿ ನೀಡಿದ್ದರು ಎಂದು ಹರ್ಜಿಂದರ್ ಸಿಂಗ್ ಭಾವ ವಲೇರಿಯನ್ ಮಾಹಿತಿ ನೀಡಿದರು. ಸೌಮ್ಯ ಸ್ವಭಾವದವರಾಗಿದ್ದಹರ್ಜಿಂದರ್ ಸಿಂಗ್ ಎಲ್ಲರೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು.
ಬುಧವಾರ ಸಂಜೆ ಅವರು ಮೃತಪಟ್ಟ ಸುದ್ದಿ ಅಧಿಕೃತವಾಗಿ ಖಚಿತವಾಯಿತು. ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ ಎಂದು ವಲೇರಿಯನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.