ADVERTISEMENT

ಮಕರ ಸಂಕ್ರಾಂತಿ ಪ್ರಯುಕ್ತ ಸಾಂಪ್ರದಾಯಿಕ ದಿನಾಚರಣೆ

ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:40 IST
Last Updated 18 ಜನವರಿ 2026, 6:40 IST
ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ದಿನಾಚರಣೆಯನ್ನು ಹೆಬ್ರಿಯ ಉದ್ಯಮಿ ಪ್ರವೀಣ್ ಬಳ್ಳಾಲ್ ಉದ್ಘಾಟಿಸಿದರು
ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ದಿನಾಚರಣೆಯನ್ನು ಹೆಬ್ರಿಯ ಉದ್ಯಮಿ ಪ್ರವೀಣ್ ಬಳ್ಳಾಲ್ ಉದ್ಘಾಟಿಸಿದರು   

ಹೆಬ್ರಿ: ಇಲ್ಲಿನ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ದಿನಾಚರಣೆಯನ್ನು ಹೆಬ್ರಿಯ ಉದ್ಯಮಿ ಪ್ರವೀಣ್ ಬಳ್ಳಾಲ್ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಮಾತನಾಡಿ, ‘ಇಂತಹ ವಿನೂತನ ಕಾರ್ಯಕ್ರಮಗಳಿಂದ ಕೃಷಿ ಬದುಕು, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಿಳಿಯಲು ಸಹಕಾರಿಯಾಗುತ್ತದೆ’ ಎಂದರು.

ಮಾವಿನ ತೋರಣ, ಶಂಖ, ಜಾಗಟೆ, ಮಡಿಕೆ ಹೊರುವುದು, ಲಾಟಿನ್ ಹಿಡಿಯವುದು, ಅಕ್ಕಿ ಮುಡಿ, ರಂಗೋಲಿ ಬಿಡಿಸುವುದು, ಮೆಹೆಂದಿ ಇಡುವುದು, ಗಾಳಿಪಟ ಹಾರಿಸುವುದು, ಹೂ ಕಟ್ಟುವುದು, ಮಡಲು ಹೆಣೆಯುವುದು, ತೊಟ್ಟಿಲು ತೂಗುವುದು, ಚೆನ್ನಮಣೆ ಆಡುವುದು, ಬೀಸು ಕಲ್ಲು, ರೇಡಿಯೊ, ತೆನೆ ಬಡಿಯುವುದು, ಭತ್ತ ಗಾಳಿ ಹಿಡಿಯುವುದು, ಹುಲ್ಲು ಗುಡಿಸುವುದು, ಒಲೆಗೆ ಬೆಂಕಿ ಉರಿಸುವುದು, ಹೋರಿ ಹಿಡಿಯುವುದು, ಭತ್ತ ಕುಟ್ಟುವುದು, ಗದ್ದೆ ನೇಜಿ ನೆಡುವುದು, ಹುಲ್ಲು ಹೊರೆ ಹೊರುವುದು, ಮೊಸರು ಕಡೆಯುವುದು, ಭತ್ತ ಅಳೆಯುವುದು, ಮೀನು ಹಿಡಿಯುವುದು, ಕಸ ಗುಡಿಸುವುದು, ಪೂಜೆ ಮಾಡುವುದು ಮೊದಲಾದವುಗಳು ಆಕರ್ಷಣೆಯಾಗಿತ್ತು. ಎಳ್ಳು–ಬೆಲ್ಲ ಸವಿದು ಕಾರ್ಯಕ್ರಮ ಮುಕ್ತಾಯಗೊಂಡಿತು.

ADVERTISEMENT

ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ, ಎಸ್.ಆರ್. ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ ಇದ್ದರು.

ಶಿಕ್ಷಕರಾದ ಹೇಮಾ ಮತ್ತು ನಾಗೇಶ್ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.