
ಬ್ರಹ್ಮಾವರ: ಬಾರ್ಕೂರು ಬಂಡೀಮಠ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಕ್ಷೇತ್ರ ನಾಗರಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಕರ ಸಂಕ್ರಾಂತಿ ಉತ್ಸವ ನಡೆಯಿತು.
ಬುಧವಾರ ಮುಂಜಾನೆ ನಾಗಮಂಡಲ, ನಾಗದರ್ಶನ, ತುಲಾಭಾರ ಸೇವೆ, ಸ್ವರಸೇವೆ ನಡೆಯಿತು. ಬಳಿಕ ನಡೆದ ಅನ್ನ ಸಂತರ್ಪಣೆ, ಪೂಜಾ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ಮಂಗಳವಾರ ಬೆಳಿಗ್ಗೆ ಬಡಾ ಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮತ್ತು ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ, ರುದ್ರಾಭಿಷೇಕ, ಕಲ್ಪೋಕ್ತ ಪೂಜೆ, ನಾಗರಡಿಯಲ್ಲಿ ಋಕ್ ಸಂಹಿತಾ ಪಾರಾಯಣ, ಮಹಾಪೂಜೆ, ಸಂಜೆ ಭಜನೆ, ರಂಗಪೂಜೆ, ಕಾಯಿ ಪೂಜೆ, ನಾಗದೇವರ ಪ್ರಸನ್ನ ಪೂಜೆ, ಹಾಲಿಟ್ಟು ಸೇವೆ, ಮಾರಿ ಪೂಜೆ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.