ಉಡುಪಿ: ಚಿನ್ನಾಭರಣ ಹಾಗೂ ಡೈಮಂಡ್ಸ್ ರೀಟೇಲ್ ವ್ಯವಹಾರ ಸಂಸ್ಥೆಯಾದ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್, ಉಡುಪಿಯಲ್ಲಿ ವಿಶಾಲ ಜಾಗವುಳ್ಳ ಹೊಸ ಶೋ ರೂಂಗೆ ಮಳಿಗೆಯನ್ನು ಸ್ಥಳಾಂತರ ಮಾಡುತ್ತಿದೆ.
ಗೀತಾಂಜಲಿ ರಸ್ತೆಯಲ್ಲಿರುವ ಗೀತಾಂಜಲಿ ಶಾಪರ್ ಸಿಟಿಗೆ ನೂತನ ಶೋ ರೂಂ ಸ್ಥಳಾಂತರವಾಗುತ್ತಿದ್ದು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬ್ರಾಂಡ್ ರಾಯಭಾರಿ, ಮಿಸ್‌ವರ್ಲ್ಡ್ ಮಾನುಷಿ ಚಿಲ್ಲರ್ ಇದೇ 7ರಂದು ಬೆಳಿಗ್ಗೆ 11.30ಕ್ಕೆ ಶೋ ರೂಂ ಉದ್ಘಾಟಿಸಲಿದ್ದಾರೆ.
ಉಡುಪಿಯಲ್ಲೇ ಅತ್ಯಂತ ದೊಡ್ಡ ಚಿನ್ನಾಭರಣ ಮತ್ತು ಡೈಮಂಡ್ ಶೋರೂಂ ಇದಾಗಿದ್ದು, ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಮತ್ತು ವಧುವಿನ ಆಭರಣಗಳು, ಪಾರ್ಟಿ ವೇರ್ ಮತ್ತು ಕ್ಯಾಷುವಲ್ ವೇರ್ ವಿನ್ಯಾಸಗಳ ಜತೆಗೆ ಬ್ರಾಂಡೆಡ್ ವಾಚ್‌ಗಳ ವ್ಯಾಪಕ ಸಂಗ್ರಹ ಒಳಗೊಂಡಿದೆ.
‘ಕರ್ನಾಟಕದ ಸಂಸ್ಕೃತಿ ಮತ್ತು ಆಚರಣೆಗೆ ತಕ್ಕಂತಹ ಚಿನ್ನಾಭರಣ ಖರೀದಿಸಬಹುದು. ಜತೆಗೆ ವಿಶಾಲವಾದ ಕಾರ್ ಪಾರ್ಕಿಂಗ್ ಸೌಲಭ್ಯವಿದೆ. ಉದ್ಘಾಟನೆ ಅಂಗವಾಗಿ ಎಲ್ಲಾ ವಜ್ರದ ಮೌಲ್ಯಗಳ ಮೇಲೆ ಶೇ10 ಕಡಿತ, ಪ್ರತಿ ಗ್ರಾಂ ಚಿನ್ನಾಭರಣಗಳಿಗೆ ₹100 ಕಡಿತ, ಜತೆಗೆ ಪ್ರತಿ ಖರೀದಿಗೆ ಒಂದು ಖಚಿತ ಗಿಫ್ಟ್ ಇದೆ. ಈ ಕೊಡುಗೆ ಇದೇ 15ರವರೆಗೆ ಮಾತ್ರ’ ಎಂದು ಮಳಿಗೆ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.