ADVERTISEMENT

ಮಲ್ಪೆಯ ಬೋಟ್‌ ಮಹಾರಾಷ್ಟ್ರದಲ್ಲಿ ಮುಳುಗಡೆ: 7 ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 16:39 IST
Last Updated 28 ನವೆಂಬರ್ 2020, 16:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮಥುರಾ ಹೆಸರಿನ ಬೋಟ್‌ ಮಹಾರಾಷ್ಟ್ರದ ಸಮುದ್ರ ಗಡಿಯಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 7 ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ.

ಶುಕ್ರವಾರ ಬೆಳಿಗ್ಗೆ ಅವಘಡಕ್ಕೆ ತುತ್ತಾದ ಬೋಟ್ ಅನ್ನು ಸಮೀಪದಲ್ಲಿದ್ದ ಬೋಟ್‌ನ ನೆರವಿನಿಂದ ತೀರಕ್ಕೆ ಎಳೆದು ತರುವ ಪ್ರಯತ್ನ ಮಾಡಲಾಯಿತಾದರೂ ನೀರು ಬೋಟ್‌ನ ಒಳಗೆ ನುಗ್ಗಿದ ಪರಿಣಾಮ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮೀನಿನ ಬಲೆ, ಸಾಮಗ್ರಿಗಳು ಹಾಗೂ ಡೀಸೆಲ್‌ ಸಮುದ್ರ ಪಾಲಾಗಿದೆ. ₹ 65 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೋಟ್‌ ಮಲ್ಪೆಯ ತಾರಾನಾಥ್ ಕುಂದರ್ ಅವರ ಮಾಲೀಕತ್ವದ್ದು ಎಂದು ತಿಳಿದುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.