ADVERTISEMENT

ಬೈಂದೂರು– ಉಳ್ಳಾಲ ಬೋಟ್‌ ಸೇವೆ ಆರಂಭಿಸುವ ಚಿಂತನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:44 IST
Last Updated 7 ಅಕ್ಟೋಬರ್ 2025, 7:44 IST
   

ಉಡುಪಿ: ಹೆದ್ದಾರಿಗೆ ಪರ್ಯಾಯವಾಗಿ ಉಡುಪಿಯ ಬೈಂದೂರಿನಿಂದ ದಕ್ಷಿಣ ಕನ್ನಡದ ಉಳ್ಳಾಲದವರೆಗೆ ಸುಮುದ್ರ ಮಾರ್ಗವಾಗಿ ವಾಟರ್ ಮೆಟ್ರೊ ಮಾದರಿಯಲ್ಲಿ ಪ್ರಯಾಣಿಕರ ಬೋಟ್ ಸೇವೆ ಆರಂಭಿಸುವ ಚಿಂತನೆ ಇದ್ದು, ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಸಂಸ್ಥೆಯಲ್ಲಿ (ಯುಸಿಎಸ್ಎಲ್‌) ಸೋಮವಾರ ಹಮ್ಮಿಕೊಂಡಿದ್ದ ಹಡಗು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಕರಾವಳಿ ಭಾಗದ ಸಂಸದರನ್ನು ಕರೆದು, ಮತ್ಸ್ಯಸಂಪದ ಸೇರಿದಂತೆ ವಿವಿಧ ಯೋಜನೆಗಳಿಗೆ ಗಮನ ನೀಡುವಂತೆ ಸೂಚಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT