ADVERTISEMENT

ಮಂದಾರ್ತಿ ಮೇಳಗಳ ತಿರುಗಾಟಕ್ಕೆ ಇಂದು ತೆರೆ

ಲಾಕ್‌ಡೌನ್‌: 330 ಆಟ ರದ್ದು , ₹1,17 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 25 ಮೇ 2020, 12:02 IST
Last Updated 25 ಮೇ 2020, 12:02 IST

ಮಂದಾರ್ತಿ(ಬ್ರಹ್ಮಾವರ): ಮಂದಾರ್ತಿ ದುರ್ಗಾಪರಮೇಶ್ವರೀ ದೇವಳದ ಐದೂ ಮೇಳಗಳ ಆಟ ಹಾಗೂತಿರುಗಾಟವನ್ನು ಕೋವಿಡ್-19ರ ಪ್ರಯುಕ್ತ ಮಾರ್ಚ್‌21 ರಿಂದ ನಿಲ್ಲಿಸಲಾಗಿತ್ತು. ಆದರೂ ಸಂಪ್ರದಾಯದಂತೆ ಐದೂ ಮೇಳಗಳ ಗಣಪತಿ ಪೂಜೆ ದಿನಂಪ್ರತಿ ದೇವಳದಲ್ಲಿ ನಡೆಯುತಿತ್ತು. ಈಗ ಐದೂ ಮೇಳಗಳ ಈ ಹಂಗಾಮಿನ ಕೊನೆಯ ದೇವರ ಸೇವೆ ಆಟವು ನಿಗದಿಯಂತೆ ಇದೇ 26ರಂದು ನಡೆಯಲಿದೆ.

ಕೊನೆಯ ದೇವರ ಸೇವೆ ಆಟ ಸೀಮಿತ ಕಲಾವಿದರನ್ನೊಳಗೊಂಡು (15 ಜನರು) ಸಂಪ್ರದಾಯದಂತೆ ನಡೆಸಲಾಗುವುದು. ಈ ಸಂದರ್ಭ ಸೀಮಿತ ಕಲಾವಿದರನ್ನು ಹೊರತುಪಡಿಸಿ ಭಕ್ತರಿಗೆ ಹಾಗೂ ಇತರ ಕಲಾವಿದರಿಗೆ ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಿದೆ.

ದೇವಳಕ್ಕೆ ಲಾಕ್‌ಡೌನ್‌ನಿಂದ ನಿಂತುಹೋದ 330ಸೇವೆಗಳಿಗೆ ಒಟ್ಟು ₹1,17,16,650 ನಷ್ಟವುಂಟಾಗಿದೆ. ತಿರುಗಾಟ ಪ್ರಾರಂಭದ ದಿನದಿಂದ ಮೇ ಅಂತ್ಯದವರೆಗಿನ ಮೇಳಗಳ ಎಲ್ಲ ಕಲಾವಿದರು ಮತ್ತು ಇತರ ಸಿಬ್ಬಂದಿಗಳಿಗೆ ಈ ಹಿಂದೆ ನಿಗದಿಪಡಿಸಿರುವ ಸಂಪೂರ್ಣ ಗೌರವಧನವನ್ನು ದೇವಳದಿಂದಲೇ ಪಾವತಿಸಲಾಗುತ್ತದೆ. 2019ರ ನವೆಂಬರ್ 18ರಂದು ಶ್ರೀಕ್ಷೇತ್ರದಲ್ಲಿ ಸೇವೆ ಆಟ ಆರಂಭಗೊಂಡು ಮಾರ್ಚ್‌ 20ರವರೆಗೆ ಐದು ಮೇಳಗಳು 610 ಸೇವೆ ಆಟಗಳನ್ನು ಪೂರೈಸಿವೆ. ಲಾಕ್‌ಡೌನ್ ಘೋಷಣೆಯಾದ ಬಳಿಕ ಐದೂ ಮೇಳಗಳ 66ದಿನಗಳ 330ಸೇವೆ ಆಟಗಳು ರದ್ದುಗೊಂಡಿವೆ. ಬಾಕಿ ಉಳಿದ ಸೇವೆಗಳನ್ನು ಮುಂದಿನ ತಿರುಗಾಟದಲ್ಲಿ ಸೇವಾಕರ್ತರಿಗೆ ಹೊಂದಿಸಿ ಕೊಡಲಾಗುವುದು’ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.