ಉಡುಪಿ: ಆತಿಥೇಯ ಮಂಗಳೂರು ವಿವಿ ತಂಡ ಇಲ್ಲಿನ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.
ಮಂಗಳೂರು ವಿವಿ ಮತ್ತು ಪೂರ್ಣಪ್ರಜ್ಞ ಕಾಲೇಜು ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಶುಕ್ರವಾರ ‘ಡಿ’ ಗುಂಪಿನ ಪಂದ್ಯದಲ್ಲಿ ಮಂಗಳೂರು ವಿವಿ 54–24ರಲ್ಲಿ ಶ್ರೀ ಜಗನ್ನಾಥ ಸಂಸ್ಕೃತ ವಿವಿಯನ್ನು ಮಣಿಸಿತು. ಮೊದಲ ದಿನ ಆತಿಥೇಯರು ಎಸ್‌ಜೆಜೆಟಿ ವಿವಿಯನ್ನು ಮಣಿಸಿದ್ದರು.
‘ಎ’ ಗುಂಪಿನ ಪಂದ್ಯದಲ್ಲಿ ಪಂಜಾಬ್‌ನ ಗುರು ಕಾಶಿ ವಿವಿ 53–26ರಲ್ಲಿ ಯೋಗಿ ವೇಮನ ವಿವಿಯನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಡಾ.ಬಿಎಎಂ ವಿವಿ 75–40ರಲ್ಲಿ ಜೆಎನ್‌ಸಿ ವಿವಿಯನ್ನು ಪರಾಭವಗೊಳಿಸಿತು. ‘ಬಿ’ ಗುಂಪಿನ ಪಂದ್ಯದಲ್ಲಿ ವಿಇಎಲ್‌ಎಸ್ ಇನ್‌ಸ್ಟಿಟ್ಯೂಟ್ ಎಸ್ ಅಂಡ್ ಟಿ ತಂಡ 39–32ರಲ್ಲಿ ಹರಿಯಾಣದ ಸಿಎಚ್ ಬನ್ಸಿಲಾಲ್ ವಿವಿಯನ್ನು ಸೋಲಿಸಿತು.
‘ಸಿ’ ಗುಂಪಿನ ಪಂದ್ಯದಲ್ಲಿ ಜುಂಜುನುವಿನ ಎಸ್‌ಜೆಜೆಟಿ ವಿವಿ 73–52ರಲ್ಲಿ ಚಂಡೀಘಡ ವಿವಿ ವಿರುದ್ಧ ಜಯಿಸಿತು. ರೋಹ್ಟಕ್‌ನ ಎಂಡಿ ವಿವಿ ಅದಮಾಸ್ ವಿವಿ ವಿರುದ್ಧ ವಾಕ್ ಓವರ್ ಪಡೆಯಿತು. ‘ಡಿ’ ಗುಂಪಿನ ಪಂದ್ಯದಲ್ಲಿ ಕೋಟ ವಿವಿ 60–39ರಲ್ಲಿ ಮೈಸೂರು ವಿವಿಯನ್ನು ಸೋಲಿಸಿತು. ಗುರುವಾರವೂ ಮೈಸೂರು ವಿವಿ ಸೋತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.