ADVERTISEMENT

ದೇವರ ಕೃಪೆ ಇದ್ದರೆ ಎಲ್ಲವೂ ಸುಸೂತ್ರ: ದಿನೇಶ ಶೇರಿಗಾರ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:59 IST
Last Updated 26 ನವೆಂಬರ್ 2022, 4:59 IST
ಬ್ರಹ್ಮಾವರ ತಾಲ್ಲೂಕು ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬಾರ್ಕೂರು ವಲಯ ಸ್ವಸಹಾಯ ಒಕ್ಕೂಟಗಳ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮವನ್ನು ಬಾರ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ ಉದ್ಘಾಟಿಸಿದರು
ಬ್ರಹ್ಮಾವರ ತಾಲ್ಲೂಕು ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬಾರ್ಕೂರು ವಲಯ ಸ್ವಸಹಾಯ ಒಕ್ಕೂಟಗಳ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮವನ್ನು ಬಾರ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ ಉದ್ಘಾಟಿಸಿದರು   

ಬ್ರಹ್ಮಾವರ: ‘ದೇವರ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ. ಪ್ರಾರ್ಥನೆ, ಪೂಜೆ, ವ್ರತ ಕೂಡ ಮಾರ್ಗವಾಗಿದೆ. ಕಷ್ಟ-ಸುಖ ಎಂತಹ ಸಮಯವಾದರೂ ಅದಕ್ಕೆ ದೇವರ ಕೃಪೆ ಬೇಕು. ಕೆಟ್ಟ ಸಮಯವಿದ್ದರೆ ಅದನ್ನು ದೂರ ಮಾಡುವಂತೆ ಹಾಗೂ ಒಳ್ಳೆ ಕಾರ್ಯಕ್ಕೆ ಮುನ್ನ ಯಾವುದೇ ಅಡೆತಡೆಗಳು ಬಾರದಿರಲು ಪೂಜಾ ಕಾರ್ಯಕ್ರಮಗಳನ್ನು ನಡೆಸುವುದು ನಮ್ಮ ಸಂಪ್ರದಾಯ’ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾಲ್ಲೂಕು ಯೋಜನಾಧಿಕಾರಿ ದಿನೇಶ ಶೇರಿಗಾರ್‌ ಹೇಳಿದರು.

ಬ್ರಹ್ಮಾವರ ತಾಲ್ಲೂಕು ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬಾರ್ಕೂರು ವಲಯ ಸ್ವಸಹಾಯ ಒಕ್ಕೂಟಗಳ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಭಾಗವಾಗಿ ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಧಾರ್ಮಿಕ ಪ್ರವಚನ ಮಾಡಿದರು.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನು ಹಂದಾಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ರಂಗನಕೆರೆಯ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್, ಬಾರ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ, ಏಕನಾಥೇಶ್ವರಿ ದೇವಸ್ಥಾನದ ಉಪಾಧ್ಯಕ್ಷ ಬಾರ್ಕುರು ಜನಾರ್ದನ ದೇವಾಡಿಗ, ಕೂಡ್ಲಿ ಜನಾರ್ದನ ದೇವಸ್ಥಾನದ ಮೊಕ್ತೇಸರ ಶ್ರೀನಿವಾಸ ಉಡುಪ, ಬಾರ್ಕೂರು ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಬಾರ್ಕೂರು ಶಿವಗಿರಿ ಕ್ಷೇತ್ರದ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸರ್ವೋತ್ತಮ ಪೂಜಾರಿ, ಬಾರ್ಕೂರು ವಲಯದ ಅಧ್ಯಕ್ಷ ಗೌರಿ.ವಿ.ಪೂಜಾರಿ ಇದ್ದರು.

ADVERTISEMENT

ಬಾರ್ಕೂರು ವಲಯದ ಮೇಲ್ವಿಚಾರಕ ಬಾಬಿ ಎಂ ಸ್ವಾಗತಿಸಿದರು. ಸೇವಾಪ್ರತಿನಿಧಿ ಕುಸುಮಾ ವಂದಿಸಿದರು. ತಾಲ್ಲೂಕಿನ ಕೃಷಿ ಮೇಲ್ವಿಚಾರಕ ರಾಜೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.