ADVERTISEMENT

ನಿಟ್ಟೆ– ಕೆಮ್ಮಣ್ಣು‌: ಮೊಸರು ಕುಡಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:50 IST
Last Updated 16 ಸೆಪ್ಟೆಂಬರ್ 2025, 2:50 IST
ಕಾರ್ಕಳ ತಾಲ್ಲೂಕು ನಿಟ್ಟೆ ರೋಟರಿ ಸಮುದಾಯ ದಳ ಹಾಗೂ ಕೆಮ್ಮಣ್ಣು ದುರ್ಗಾ ಫ್ರೆಂಡ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ನಿಟ್ಟೆ - ಕೆಮ್ಮಣ್ಣು‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.
ಕಾರ್ಕಳ ತಾಲ್ಲೂಕು ನಿಟ್ಟೆ ರೋಟರಿ ಸಮುದಾಯ ದಳ ಹಾಗೂ ಕೆಮ್ಮಣ್ಣು ದುರ್ಗಾ ಫ್ರೆಂಡ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ನಿಟ್ಟೆ - ಕೆಮ್ಮಣ್ಣು‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.   

ಕಾರ್ಕಳ: ತಾಲ್ಲೂಕಿನ ನಿಟ್ಟೆ ರೋಟರಿ ಸಮುದಾಯ ದಳ, ಕೆಮ್ಮಣ್ಣು ದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ನಿಟ್ಟೆ ಕೆಮ್ಮಣ್ಣು‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.

ವಿವಿಧ ವಯೋಮಾನದವರಿಗೆ, ವಿಶೇಷ ಆಕರ್ಷಣೆಯಾಗಿ ಎರಡು ಸ್ತರಗಳಲ್ಲಿ ಆಯೋಜಿಸಲಾದ ಮುದ್ದು ಕೃಷ್ಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ. ರಘುನಂದನ್ ರಾವ್, ರೋಟರಿ ಜಿಲ್ಲೆ 3182ರ ಪಬ್ಲಿಕ್ ಇಮೇಜ್ ಜಿಲ್ಲಾ ಉಪಾಧ್ಯಕ್ಷೆ ರೇಖಾ ಉಪಾಧ್ಯಾಯ, ಝೋನಲ್ ಲೆಫ್ಟಿನೆಂಟ್ ಪ್ರಶಾಂತ್ ಬೆಳಿರಾಯ, ಆರ್‌ಸಿಸಿಯ ಪೂರ್ವ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್, ನಿಟ್ಟೆ ಗ್ರಾಮ ಪಂಚಾಯಿತಿ ಪ್ರತಿನಿಧಿ ಸಂತೋಷ್ ಶೆಟ್ಟಿ ಮಾತನಾಡಿದರು.

ADVERTISEMENT

ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಪೃಥ್ವಿ, ನಿರೀಕ್ಷಾ ದೇವಾಡಿಗ, ಸುಮಿತ್, ಕೆಮ್ಮಣ್ಣು ದೇವಸ್ಥಾನದ ಪರಿಚಾರಕ ನಾರಾಯಣ ದೇವಾಡಿಗ, ಕೃಷಿ ಕ್ಷೇತ್ರದ ಸಾಧಕರಾದ ಸುದಾಮ ಶೆಟ್ಟಿ ದುಡ್ಡುಮನೆ ಬೋಳ, ವಾಸು ಬಿ. ಕೋಟ್ಯಾನ್ ಅವರನ್ನು ಪುರಸ್ಕರಿಸಲಾಯಿತು.

ರೋಟರಿ ಸಮುದಾಯ ದಳದ ಸಭಾಪತಿ ಡಾ.ದಿಲೀಪ್ ಕುಮಾರ್, ಕಾರ್ಯದರ್ಶಿ ಶ್ರೀಧರ ವಿ. ಆಚಾರ್ಯ, ಕೆಮ್ಮಣ್ಣು– ನಿಟ್ಟೆ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಾನಂದ ರಾವ್ ಭಾಗವಹಿಸಿದ್ದರು. ಅಧ್ಯಕ್ಷ ಡಾ.ಪ್ರಶಾಂತ್ ಕುಮಾರ್ ಸ್ವಾಗತಿಸಿದರು. ಮಾರ್ಗದರ್ಶಕ ಕೆ. ಅನಿಲ್ ಕುಮಾರ್, ಶಂಕರ್ ಪೂಜಾರಿ, ಉಮೇಶ್ ಕೋಟ್ಯಾನ್ ಸನ್ಮಾನಪತ್ರ, ವಿಠಲ್ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಸಮುದಾಯ ದಳದ ಅಧ್ಯಕ್ಷ ಗಣೇಶ್ ಭಟ್ ವಂದಿಸಿದರು. ಸತೀಶ್ ಶೆಟ್ಟಿ ಅಗ್ಗ್ಯೊಟ್ಟು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.