ADVERTISEMENT

ಮುದ್ರಾಡಿ: ನೇತಾಜಿ ಪ್ರತಿಮೆಗೆ ನಮನ 

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:33 IST
Last Updated 5 ಫೆಬ್ರುವರಿ 2026, 6:33 IST
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಸಂದರ್ಭದಲ್ಲಿ ಮುದ್ರಾಡಿ ಪೇಟೆಯಲ್ಲಿರುವ ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಸಂದರ್ಭದಲ್ಲಿ ಮುದ್ರಾಡಿ ಪೇಟೆಯಲ್ಲಿರುವ ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು   

ಹೆಬ್ರಿ: ‘ನೇತಾಜಿಯವರ ಆದರ್ಶಗಳು ಹಾಗೂ ರಾಷ್ಟ್ರ ಪ್ರೇಮ ನಮಗೆಲ್ಲ ಅನುಕರಣೀಯ’ ಎಂದು ಮುದ್ರಾಡಿ ಪಂಚಾಯಿತಿ ಸದಸ್ಯ ಗಣಪತಿ ಎಂ. ಹೇಳಿದರು.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಸಂದರ್ಭದಲ್ಲಿ ಮುದ್ರಾಡಿ ಪೇಟೆಯಲ್ಲಿರುವ ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಸನತ್ ಕುಮಾರ್, ಶಾಂತಾ ದಿನೇಶ ಪೂಜಾರಿ, ಶುಭಧರ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅಮೃತ ಕುಲಾಲ್, ಮುದ್ರಾಡಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಸಂತೋಷ್ ಕುಮಾರ್ ಶೆಟ್ಟಿ, ರಾಘವ ನಾಯ್ಕ್, ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಪ್ರಕಾಶ್ ರಾವ್ ಇದ್ದರು. ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿದರು. ಪಿ.‌ವಿ.ಆನಂದ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.