ADVERTISEMENT

ಕೊಲ್ಲೂರು ಮೂಕಾಂಬಿಕೆಗೆ ವಜ್ರಖಚಿತ ಕಿರೀಟ ಅರ್ಪಿಸಿದ ಸಂಗೀತ ನಿರ್ದೇಶಕ ಇಳಯರಾಜ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 0:24 IST
Last Updated 11 ಸೆಪ್ಟೆಂಬರ್ 2025, 0:24 IST
<div class="paragraphs"><p>ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಸಂಗೀತ ನಿರ್ದೇಶಕ ಇಳಯರಾಜ ಕೋಟ್ಯಂತರ ಬೆಳೆ ಬಾಳುವ ವಜ್ರ ಕಿರೀಟ ಹಾಗೂ ಬೆಳ್ಳಿಯ ಕಿರೀಟ ಅರ್ಪಿಸಿದರು</p></div>

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಸಂಗೀತ ನಿರ್ದೇಶಕ ಇಳಯರಾಜ ಕೋಟ್ಯಂತರ ಬೆಳೆ ಬಾಳುವ ವಜ್ರ ಕಿರೀಟ ಹಾಗೂ ಬೆಳ್ಳಿಯ ಕಿರೀಟ ಅರ್ಪಿಸಿದರು

   

ಕುಂದಾಪುರ (ಉಡುಪಿ): ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ಮೌಲ್ಯದ ವಜ್ರಖಚಿತ ಕಿರೀಟ, ಚಿನ್ನಾಭರಣವನ್ನು ಬುಧವಾರ ಅರ್ಪಿಸಿದ್ದಾರೆ.

ಈ ಹಿಂದೆ ದೇವಿಗೆ ವಜ್ರಖಚಿತ ಹಸ್ತ ನೀಡಿದ್ದ ಅವರು, ಈ ಬಾರಿ ವಜ್ರದ ಕಿರೀಟ, ಚಿನ್ನಾಭರಣ, ವೀರಭದ್ರ ದೇವರಿಗೆ ವಜ್ರಖಚಿತ ರಜತ ಕಿರೀಟ, ಬೆಳ್ಳಿ ಖಡ್ಗ ಸಮರ್ಪಿಸಿದ್ದಾರೆ.

ADVERTISEMENT

ಪಂಚವಾದ್ಯಗಳೊಂದಿಗೆ ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕಿರೀಟ, ಚಿನ್ನಾಭರಣ ತರಲಾಯಿತು. ಕ್ಷೇತ್ರದ ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದ ಬಳಿಕ ದೇವರಿಗೆ ಕಿರೀಟ, ಆಭರಣಗಳನ್ನು ಒಪ್ಪಿಸಲಾಯಿತು. ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.

‘ನನ್ನದೇನು ಇಲ್ಲ. ಎಲ್ಲಾ ಆ ಜಗನ್ಮಾತೆ ತಾಯಿ ಮೂಕಾಂಬಿಕೆಯ ಅನುಗ್ರಹ ಮತ್ತು ಆಶೀರ್ವಾದ’ ಎಂದು ಇಳಯರಾಜ ಹೇಳಿದರು.

ಇಳಯರಾಜ ಅವರ ಪುತ್ರ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ, ಮುಖಂಡ  ಕೆ. ಗೋಪಾಲ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ಶೆಟ್ಟಿ, ಸಹಾಯ ಕಾರ್ಯನಿರ್ವಹಣಾ ಅಧಿಕಾರಿ ತುಂಬಗಿ, ಅರ್ಚಕರಾದ ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ, ವಿಘ್ನೇಶ್ವರ ಅಡಿಗ, ಎನ್. ಸುಬ್ರಮಣ್ಯ ಅಡಿಗ, ಸುರೇಶ್ ಭಟ್, ಶಿವರಾಮ ಅಡಿಗ, ನರಸಿಂಹ ಭಟ್, ಸುದರ್ಶನ್ ಜೋಯಿಸ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

ವೀರಭದ್ರ ದೇವರಿಗೆ ಅರ್ಪಿಸಿದ ಸ್ವರ್ಣ ಲೇಪಿತ ಬೆಳ್ಳಿಯ ಖಡ್ಗ
ಕೊಲ್ಲೂರಿನ ಓಲಗ ಮಂಟಪದಿಂದ ಮೆರವಣಿಗೆಯಲ್ಲಿ ವಜ್ರ ಕಿರೀಟ ಆಭರಣ ರಜತ ಕಿರೀಟ ಹಾಗೂ ಖಡ್ಗವನ್ನು ದೇವಸ್ಥಾನಕ್ಕೆ ತರಲಾಯಿತು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.