ADVERTISEMENT

‘ನಮ್ಮ ಕುಡ್ಲ ಟಾಕೀಸ್’ ಆರಂಭ 7ರಿಂದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:25 IST
Last Updated 5 ಮಾರ್ಚ್ 2021, 15:25 IST

ಉಡುಪಿ: ‘ಮನೆಯೇ ಚಿತ್ರಮಂದಿರ’ ಎಂಬ ಪರಿಕಲ್ಪನೆಯಡಿ ಮಾರ್ಚ್ 7ರಿಂದ ‘ನಮ್ಮ ಕುಡ್ಲ ಟಾಕೀಸ್’ ಆರಂಭವಾಗುತ್ತಿದ್ದು ಕೇಬಲ್‌ ಸಂರ್ಪಕ ಇರುವ ಟಿವಿಗಳಲ್ಲಿ ಸಾರ್ವಜನಿಕರು ಹೊಸ ತುಳು ಸಿನಿಮಾಗಳನ್ನು ವೀಕ್ಷಿಸಬಹುದು ಎಂದು ಸಂಸ್ಥೆಯ ಸಿಒಒ ಕದ್ರಿ ನವನೀತ್ ಶೆಟ್ಟಿ ತಿಳಿಸಿದರು.

ಕೋವಿಡ್‌ನಿಂದ ತುಳು ಸಿನಿಮಾ ರಂಗ ಸಂಕಷ್ಟಕ್ಕೆ ಸಿಲುಕಿದ್ದು ಥಿಯೇಟರ್‌ಗಳತ್ತ ನಿರೀಕ್ಷಿತ ಮಟ್ಟದ ಪ್ರೇಕ್ಷಕರು ಬರುತ್ತಿಲ್ಲ. ಜತೆಗೆ ಚಿತ್ರಮಂದಿರಗಳ ಕೊರತೆ ಎದುರಾಗಿದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಕುಡ್ಲ ಟಾಕೀಸ್ ಆರಂಭಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ನಮ್ಮ ಕುಡ್ಲ ಟಾಕೀಸ್‌ ಸೌಲಭ್ಯ ಪಡೆಯಲು ಪ್ರತಿ ಗ್ರಾಹಕರು ಪ್ರತಿ ತಿಂಗಳು ₹ 120 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಎಚ್‌ಡಿ ಕೇಬಲ್ ಸೌಲಭ್ಯವಿದ್ದರೆ ತಿಂಗಳಿಗೆ 160 ಪಾವತಿಸಬೇಕು. ಮೊದಲ ಚಿತ್ರವಾಗಿ ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾ ಮಾರ್ಚ್‌ 7ರಂದು ಮಧ್ಯಾಹ್ನ 1.30ಕ್ಕೆ, ಸಂಜೆ 6ಕ್ಕೆ ಹಾಗೂ ರಾತ್ರಿ 8ಕ್ಕೆ ಪ್ರದರ್ಶನ ವಾಗಲಿದೆ. ಪ್ರತಿ ಭಾನುವಾರ ಮೂರು ಪ್ರದರ್ಶನಗಳಂತೆ 12 ಪ್ರದರ್ಶನಗಳನ್ನು ಪ್ರೇಕ್ಷಕರು ವೀಕ್ಷಿಸಬಹುದು ಎಂದರು.

ADVERTISEMENT

ಸೆನ್ಸಾರ್ ಆದ ತುಳು ಸಿನಿಮಾಗಳನ್ನು ವೀಕ್ಷಿಸಿ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಬಿಡುಗಡೆಗೆ ಒಪ್ಪಿಗೆ ನೀಡಲಾಗುವುದು. ಒಂದು ತಿಂಗಳು ಟಿವಿಗಳಲ್ಲಿ ಚಿತ್ರ ಪ್ರದರ್ಶನದ ನಂತರ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬಹುದು. ನಮ್ಮ ಕುಡ್ಲ ಟಾಕೀಸ್‌ಗೆ ಸಿನಿಮಾ ನೀಡುವ ನಿರ್ಮಾಕರಿಗೆ ಗೌರವ ಧನ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ನಾಡ್ ಇನ್ಫೋಟೆಕ್ ಸಿಇಒ ಹರೀಶ್ ಬಿ.ಕರ್ಕೆರಾ, ಅರ್ಜುನ್ ಕಾಪಿಕಾಡ್‌, ನಿರ್ಮಾಪಕ ನಿಶಾನ್ ಕೃಷ್ಣ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.