ಶಿರ್ವ: ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 3 ಮತ್ತು 4ರಂದು ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ‘ಹ್ಯಾಕೋತ್ಸವ–2025’ ಆಯೋಜಿಸಲಾಗಿದೆ.
ಹ್ಯಾಕಥಾನ್‌ನಲ್ಲಿ ರಾಷ್ಟ್ರದಾದ್ಯಂತ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಯುವ ಅನ್ವೇಷಕರನ್ನು ಪ್ರೋತ್ಸಾಹಿಸುವ ಸಲುವಾಗಿ ನಡೆಯುವ ಈ ಸ್ಪರ್ಧೆ ಕೋಡಿಂಗ್ ಮತ್ತು ತಂತ್ರಜ್ಞಾನದ ಮೂಲಕ ಗಣಕೀಕೃತ ಪ್ರೋಗ್ರಾಂಗಳನ್ನು ರೂಪಿಸುವುದಾಗಿದೆ. 180ಕ್ಕೂ ಹೆಚ್ಚು ತಂಡಗಳು ನೋಂದಣಿಗೊಂಡಿದ್ದು, ಅವುಗಳಲ್ಲಿ 80ಕ್ಕೂ ಅಧಿಕ ಅತ್ಯುತ್ತಮ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದೆ.
ಈ ಕಾರ್ಯಕ್ರಮಕ್ಕೆ ಹೆಸರಾಂತ ಸಂಸ್ಥೆಗಳಾದ ಬಿಇ ಪ್ರಾಕ್ಟಿಕಲ್, ಸಂಗಮ್ ಒನ್, ಕಾರ್ಮಿಕ್ ಸೊಲೂಲ್ಯುಷನ್, ಪೆರ್ಸೆಂಡೆಝ್ ಗ್ರೂಪ್, ರಿಯಲ್ ಮೆಟಾ ಮೊದಲಾದವು ಸಹಕಾರ ನೀಡಲಿವೆ.
ವಿಜೇತರಿಗೆ ಪ್ರಥಮ ₹35 ಸಾವಿರ, ದ್ವಿತೀಯ ₹25 ಸಾವಿರ ಮತ್ತು ಉತ್ತಮ 4 ತಂಡಗಳಿಗೆ ತಲಾ ₹10 ಸಾವಿರ ಮೌಲ್ಯದ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಹ್ಯಾಕೋತ್ಸವ –2025 ಇದು ಕಾಲೇಜಿನ ಮತ್ತು ಉದ್ಯಮ ಸಂಸ್ಥೆಗಳ ನಡುವೆ ಉತ್ತಮ ಸಹಕಾರ ಮತ್ತು ನಾವೀನ್ಯತೆ ಬೆಳೆಸಲು ಮಹತ್ವದ ಹೆಜ್ಜೆಯಾಗಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ತಂತ್ರಜ್ಞಾನ ನಾಯಕರಾಗಿ ರೂಪುಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.