ADVERTISEMENT

ದೊಂಡೆರಂಗಡಿ | ಯತೀಶ್ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಟೂರ್ನಿ: 16 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 8:01 IST
Last Updated 27 ಡಿಸೆಂಬರ್ 2025, 8:01 IST
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಬಡ್ಡಿ ಟೂರ್ನಿ ಉದ್ಘಾಟಿಸಿದರು
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಬಡ್ಡಿ ಟೂರ್ನಿ ಉದ್ಘಾಟಿಸಿದರು   

ಹೆಬ್ರಿ: ದೊಂಡೆರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥ ಯತೀಶ್ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿ ನಡೆಯಿತು.

ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಟೂರ್ನಿಯಲ್ಲಿ, ರಾಷ್ಟ್ರ ಮಟ್ಟದ 8 ತಂಡಗಳ ಲೀಗ್ ಮಾದರಿ ಟೂರ್ನಿ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ 16 ತಂಡಗಳ ಕಬಡ್ಡಿ ಟೂರ್ನಿ ನಡೆಯಿತು.

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ದಿ.ಅರವಿಂದ ಹೆಗ್ಡೆ ಕ್ರೀಡಾಂಗಣ ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭ ಕೋರಿದರು.

ADVERTISEMENT

ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ನಾಯ್ಕ, ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಧನಲಕ್ಷ್ಮಿ ಪೂಜಾರಿ ಮತ್ತು ಶಗುನ್ ವರ್ಮಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಯತೀಶ್ ಶೆಟ್ಟಿ ಸಹೋದರ ಸತೀಶ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್‌, ಉಡುಪಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಹರಿಪ್ರಸಾದ್‌ ರೈ, ಮುಂಬೈ ಉದ್ಯಮಿ ಪಡುಕುಡೂರು ಹರೀಶ ಶೆಟ್ಟಿ ಪಡುಪರ್ಕಳ, ಪ್ರಮುಖರಾದ ಶೇಖರ ಮಡಿವಾಳ್‌, ಮನೋಜ್‌ ಹೆಗ್ಡೆ ಮೂರ್ಸಾಲು, ಯೋಗೀಶ ಮಲ್ಯ ಕಡ್ತಲ, ಪ್ರವೀಣ್‌ ಬಲ್ಲಾಳ್‌ ಹೆಬ್ರಿ, ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ, ರಾಜೇಂದ್ರ ಸುವರ್ಣ, ಭಾಸ್ಕರ ಶೆಟ್ಟಿ ಮುಂಬೈ, ರಮೇಶ ಸುವರ್ಣ ಕಡ್ತಲ, ರಾಘವ ದೇವಾಡಿಗ ಎಳ್ಳಾರೆ, ಜಗದೀಶ ಹೆಗ್ಡೆ ಕಡ್ತಲ, ಪ್ರಮೋದ್‌ ಕುಮಾರ್‌ ಹೆಗ್ಡೆ ಕಡ್ತಲ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಂಕರ ಶೇರಿಗಾರ್‌ ಹೆಬ್ರಿ, ಕಬಡ್ಡಿ ಪಟು ಸುಕೇಶ ಹೆಗ್ಡೆ ಕಡ್ತಲ, ಶ್ರೀಧರ ಶೆಟ್ಟಿ ಕುತ್ಯಾರುಬೀಡು, ಸತೀಶ ಶೆಟ್ಟಿ ಸಾಂತ್ಯಾರು, ಶಂಕರ ಶೆಟ್ಟಿ, ಸದಾನಂದ ಕುಲಾಲ್‌, ಅಖಿಲೇಶ್‌ ಶೆಟ್ಟಿ, ಸಂಪತ್‌ ಪೂಜಾರಿ ಪನೋಲು ಕುಕ್ಕುಜೆ, ಆಯೋಜನಾ ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಇದ್ದರು.

ಸಂಪತ್‌ ಪೂಜಾರಿ ಸ್ವಾಗತಿಸಿದರು. ಮುನಿಯಾಲು ಗೋಪಿನಾಥ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್‌ ದುಗ್ಗನಬೆಟ್ಟು ವಂದಿಸಿ ವಿನಯಾ ಆರ್‌ ಭಟ್‌ ಮತ್ತು ಪ್ರಸನ್ನ ಶೆಟ್ಟಿಗಾರ್‌ ಎಳ್ಳಾರೆ ನಿರೂಪಿಸಿದರು.

ಯತೀಶ್‌ ಟ್ರೋಫಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್‌ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಪ್ರಮುಖರಾದ ಮುನಿಯಾಲು ಗೋಪಿನಾಥ ಭಟ್‌, ಬೈರಂಪಳ್ಳಿಯ ಸತೀಶ ಶೆಟ್ಟಿ ಕುತ್ಯಾರುಬೀಡು, ರಾಘವ ದೇವಾಡಿಗ ಎಳ್ಳಾರೆ, ಕುಕ್ಕುಜೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಮನ ಭಟ್‌, ನಂದ ಕುಮಾರ್‌ ಶೆಟ್ಟಿ 41ನೇ ಶೀರೂರು, ಪ್ರಸನ್ನ ದೇವಾಡಿಗ ದೊಂಡೆರಂಗಡಿ, ಯತೀಶ ಶೆಟ್ಟಿ ಸಹೋದರ ಸತೀಶ ಶೆಟ್ಟಿ, ವಿಕಾಸ ಹೆಗ್ಡೆ ಅಡಿಮಾರು, ಮಾಜಿ ಸೈನಿಕ ವಿಶ್ವನಾಥ ಶೆಟ್ಟಿ ಕಡ್ತಲ, ವಕೀಲ ರಾಘವ ಕುಕ್ಕುಜೆ, ಹರೀಶ ಪೂಜಾರಿ ದುಗ್ಗನಬೆಟ್ಟು, ಕಡ್ತಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್‌ ಹೆಗ್ಡೆ ಉಪಸ್ಥಿತರಿದ್ದರು.

ಕಬಡ್ಡಿ ಟೂರ್ನಿಯ ಫಲಿತಾಂಶ

ಎರಡು ವಿಭಾಗಗಳಲ್ಲಿ ನಡೆದ ಟೂರ್ನಿಯ ವಿಜೇತರಿಗೆ ನಗದು ಸಹಿತ ಯತೀಶ್ ಟ್ರೋಫಿ ನೀಡಲಾಯಿತು. ಕಾರ್ಕಳ ವಿಧಾನಸಭಾ ಮಟ್ಟದ ಫಲಿತಾಂಶ : ಪ್ರಥಮ - ದಿ ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ದ್ವಿತೀಯ - ಅದಿಶ್ ಫ್ರೆಂಡ್ಸ್ ಕಡ್ತಲ ತೃತೀಯ - ಯಶಸ್ವಿ ಫ್ರೆಂಡ್ಸ್ ದೊಂಡೆರಂಗಡಿ ಚತುರ್ಥ - ಕ್ರೇಜಿ ಬಾಯ್ಸ್ ಮುನಿಯಲು ರಾಷ್ಟ್ರ ಮಟ್ಟದ ಅಹ್ವಾನಿತ ತಂಡಗಳ ಫಲಿತಾಂಶ:  ಪ್ರಥಮ - ಆಳ್ವಾಸ್ ಮೂಡುಬಿದಿರೆ ದ್ವಿತೀಯ - ಉತ್ತರ ಕನ್ನಡ ತಂಡ ತೃತೀಯ - ಎನ್.ಎಂ.ಸಿ ಸುಳ್ಯ ಚತುರ್ಥ - ಎಸ್‌ಡಿಎಂ ಉಜಿರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.