ಉಡುಪಿ: ಕರ್ನಾಟಕ ಮತ್ತು ಗೋವಾದ ಎನ್‌ಸಿಸಿಯ ಎಪ್ಪತ್ತೆರಡು ನೌಕಾ ಕೆಡೆಟ್‌ಗಳು ಈಚೆಗೆ ಮಲ್ಪೆಯಿಂದ ಸಾಗರ ನೌಕಾಯಾನ ಆರಂಭಿಸಿದರು.
ಮಲ್ಪೆ ಪ್ರವಾಸೋದ್ಯಮ ಜೆಟ್ಟಿಯಲ್ಲಿ ಏರ್ ಕಮೋಡೋರ್ ಎಸ್.ಬಿ. ಅರುಣ್‌ಕುಮಾರ್ ಅವರು ನೌಕಾಯಾನಕ್ಕೆ ಚಾಲನೆ ನೀಡಿದರು.
ಎನ್‌ಸಿಸಿ ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ (ಯುಸಿಎಸ್‌ಎಲ್) ಸಿಎಫ್‌ಒ ಶಂಕರ್ ನಟರಾಜ್ ಮತ್ತು ಯುಸಿಎಸ್‌ಎಲ್ ಡಿಜಿಎಂ ಎಂ . ಅಂಬಲವನನ್ ಉಪಸ್ಥಿತರಿದ್ದರು.
ಉದ್ಯಾವರದ ಪ್ರಶಾಂತ ಪಾಪನಾಶಿನಿ ನದಿಯಿಂದ ಆರಂಭಗೊಂಡು, ಕೆಡೆಟ್‌ಗಳು ಮಲ್ಪೆ ಬಂದರಿನಿಂದ ತೆರೆದ ಸಾಗರಕ್ಕೆ ತಮ್ಮ ಪ್ರಯಾಣವನ್ನು ಕೈಗೊಂಡರು.
ಸಾಗರ ನೌಕಾಯಾನಕ್ಕೆ 27 ಅಡಿ ಉದ್ದದ ಮೂರು ಡಿಕೆ ವೇಲರ್ ಕ್ಲಾಸ್ ದೋಣಿಗಳನ್ನ ಬಳಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.