ADVERTISEMENT

ಉಡುಪಿ: ಪಾಸ್ ಇಲ್ಲ, ಸಂಚಾರ ಸಂಕಷ್ಟ: ಜನರು ವಾಪಸ್‌

ಜಾರಿಯಾಗದ ಉಡುಪಿ– ಮಂಗಳೂರು ಒಂದುಘಟಕ ಆದೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2020, 14:40 IST
Last Updated 12 ಮೇ 2020, 14:40 IST

ಪಡುಬಿದ್ರಿ: ‘ಉಡುಪಿ–ಮಂಗಳೂರು ಮಧ್ಯೆ ಸಂಚರಿಸಲು ಪಾಸ್ ಅಗತ್ಯ ಇಲ್ಲ’ ಎಂಬ ಆದೇಶ ಮಂಗಳವಾರವೂ ಗೊಂದಲಕ್ಕೆ ಎಡೆಮಾಡಿಕೊಟ್ಟಿತು.

ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಇಲ್ಲದೆ ಬಂದವರನ್ನು ಹೆಜಮಾಡಿಯ ತಪಾಸಣಾ ಕೇಂದ್ರದಿಂದ ವಾಪಸ್‌ ಕಳುಹಿಸಿದ ಘಟನೆ ನಡೆಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಉದ್ಯೋಗಕ್ಕೆ ತೆರಳುವವರು ಹೊರತುಪಡಿಸಿ ಇತರರು ಪಾಸ್ ಇಲ್ಲದೆ ಉಡುಪಿಯಿಂದ ಮಂಗಳೂರು ಕಡೆಗೆ ಹಾಗೂ ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸಲು ಜಿಲ್ಲೆಗಳ ಗಡಿದಾಟಲು ಮುಂದಾದರು. ಆದರೆ ಚೆಕ್‌ಪೋಸ್ಟ್‌ನಲ್ಲಿ ‘ಪಾಸ್ ಅಗತ್ಯ ಇದೆ’ ಎಂದು ಪೊಲೀಸರು ಅವರನ್ನು ತಡೆದರು. ಕೆಲವರು ‘ಪಾಸ್ ಇಲ್ಲದೆ ಸಂಚರಿಸಲು ಸರ್ಕಾರ ಆದೇಶಿಸಿದೆ’ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.

ADVERTISEMENT

ಕೊನೆಗೆ ಪಾಸ್ ಇಲ್ಲದೆ ಬಂದವರನ್ನು ಪೊಲೀಸರು ವಾಪಸ್‌ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.